
ಪುತ್ರನ ವಿರುದ್ಧ ಗುಡುಗುತ್ತಿರೋ ಯತ್ನಾಳ್ ಆರೋಪಕ್ಕೆ ಕೊನೆಗೂ ಮೌನ ಮುರಿದ ರಾಜಾಹುಲಿ
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಷಯದ ಕುರಿತ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಶಿವಮೊಗ್ಗದಲ್ಲಿ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಶಿವಮೊಗ್ಗದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮಾತನಾಡಿದ್ದು, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಷಯ ಎಲ್ಲಾ ಸುಸೂತ್ರವಾಗಿ ಬಗೆಹರಿಯುತ್ತದೆ. ಎಲ್ಲರೂ ಒಟ್ಟಾಗಿ ಹೋಗುವುದರಿಂದ ಸಾಧನೆ ಮಾಡಲು ಸಾಧ್ಯ ಇದೆ. ಪರಸ್ಪರ ಕಚ್ಚಾಡುವುದರಿಂದ ಯಾರಿಗೂ ಲಾಭ ಇಲ್ಲ ಎಂದು ಹೇಳಿದ್ದಾರೆ.