ಸಾಮಾನ್ಯರ ಮನೆಯಲ್ಲೂ ಇರುತ್ತೆ 3-4 ಕೋಟಿ ದುಡ್ಡು, ಮಾಡಾಳ್ ಮಾತು ಜನರ ಕಿವಿ ತೂತು!

ಮನೆಯಲ್ಲೇ ಇದ್ದೆ, ಮಾಡಾಳ್ ಹೇಳಿಕೆಯಿಂದ ಹಲವು ಅನುಮಾನ, ಇದಕ್ಕಿಂತ ಸಾಕ್ಷಿ ಬೇಕಾ, ಮಾಡಾಳ್ ರಕ್ಷಣೆಗೆ ನಿಂತಿದೆ ಬಿಜೆಪಿ ಎಂದ ಸಿದ್ದರಾಮಯ್ಯ, ಕಾಂಗ್ರೆಸ್ ಸೇರ್ತಾರ ಬಿಜೆಪಿ ಸಚಿವ ವಿ ಸೋಮಣ್ಣ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

First Published Mar 7, 2023, 10:57 PM IST | Last Updated Mar 7, 2023, 10:57 PM IST

ಲಂಚ ಪ್ರಕರಣದಲ್ಲಿ ಪ್ರಮುಖ ಆರೋಪಿ ಮಾಡಾಳ್ ವಿರೂಪಾಕ್ಷಪ್ಪಗೆ ನಿರೀಕ್ಷಣಾ ಜಾಮೀನು ಸಿಕ್ಕ ಬೆನ್ನಲ್ಲೇ ಪ್ರತ್ಯಕ್ಷಗೊಂಡಿದ್ದಾರೆ. ಅದ್ಧೂರಿ ಮೆರವಣಿಗೆ ಮೂಲಕ ಮಾಡಾಳ್ ನಾಚಿಕೆ ಇಲ್ಲದೆ ಸಾಗಿದ್ದಾರೆ. ಇದೇ ವೇಳೆ ಭಾರತ್ ಮಾತಾಕಿ ಜೈ ಎಂಬ ಘೋಷಣೆ ಕೂಗಲಾಗಿದೆ. ಬಳಿಕ ಮಾತನಾಡಿದ ಮಾಡಾಳ್, ನಾನು ಮನೆಯಲ್ಲೇ ಇದ್ದೆ ಎಂದು ಲೋಕಾಯುಕ್ತ ಮುಖಕ್ಕೆ ಕಪಾಳ ಮೋಕ್ಷ ಮಾಡಿದ್ದಾರೆ. ಇಷ್ಟೇ ಅಲ್ಲ,ಇದು ಅಡಿಕೆ ಬೆಳಗಾರರ ಕ್ಷೇತ್ರ  ಚನ್ನಗಿರಿಯ ಪ್ರತಿ ಸಾಮಾನ್ಯನ ಮನೆಯಲ್ಲಿ 3 ರಿಂದ 4 ಕೋಟಿ ರೂಪಾಯಿ ದುಡ್ಡು ಇಟ್ಟುಕೊಂಡಿರುತ್ತಾರೆ ಎಂದು ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹೇಳಿದ್ದಾರೆ.  ಮೆರವಣಿಗೆ ಮೂಲಕ ಸಾಗಿದ ವಿರೂಪಾಕ್ಷಪ್ಪ, ಜನರ ಕಿವಿ ಮೇಲೆ ಹೂವಿಡುವ ಪ್ರಯತ್ನ ಮಾಡಿದ್ದಾರೆ. ಇದೀಗ ಮಾಡಾಳ್ ಮೆರವಣಿಗೆ ಹೇಳಿಕೆಗೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಇಷ್ಟಾದರೂ ಬಿಜೆಪಿ ಇನ್ನೂ ಮಾಡಾಳ್ ಉಚ್ಚಾಟನೆ ಮಾಡಿಲ್ಲ.