Asianet Suvarna News Asianet Suvarna News

ಬ್ರಾಹ್ಮಣರು ಇಲ್ಲದಿದ್ದರೆ ಹಿಂದುತ್ವ ಉಳಿಯಲು ಸಾಧ್ಯವಿಲ್ಲ: ಸುಬ್ಬರಾಯ ಹೆಗ್ಗಡೆ

ಬ್ರಾಹ್ಮಣರನ್ನು ತುಳಿಯುವ ಕೆಲಸ ನಡೆಯುತ್ತಿದೆ ಎಂದು ಬ್ರಾಹ್ಮಣ ಸಭಾದ ಮುಖಂಡ ಸುಬ್ಬರಾಯ ಹೆಗ್ಗಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
 

ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಬ್ರಾಹ್ಮಣ ಸಮುದಾಯ ಬೇಸರ ವ್ಯಕ್ತಪಡಿಸಿದೆ. ಬ್ರಾಹ್ಮಣರನ್ನು ತುಳಿದರೆ ಹಿಂದುತ್ವವನ್ನು ತುಳಿಯಬಹುದು, ಬ್ರಾಹ್ಮಣರು ಇಲ್ಲದಿದ್ದರೆ ಹಿಂದುತ್ವ ಉಳಿಯಲು ಸಾಧ್ಯವಿಲ್ಲ ಎಂದು ಬ್ರಾಹ್ಮಣ ಸಭಾದ ಮುಖಂಡ ಸುಬ್ಬರಾಯ ಹೆಗ್ಗಡೆ ತಿಳಿಸಿದ್ದಾರೆ. ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕವಾಗಿ ಹತ್ತಿಕ್ಕಿದ್ದಾರೆ, ನಮ್ಮ ಬಳಿ ಈಗ ಉಳಿದುಕೊಂಡಿರುವುದು ಬುದ್ಧಿವಂತಿಕೆ ಮಾತ್ರ. ಇದೀಗ ಬುದ್ಧಿವಂತಿಕೆ ಹತ್ತಿಕ್ಕಲು ಪ್ರಯತ್ನ ಮಾಡುತ್ತಿದ್ದಾರೆ. ರಾಜಕೀಯವಾಗಿ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ಅವರು ಕಿಡಿ ಕಾರಿದ್ದಾರೆ.

ಸಾವಿನ ದವಡೆಯಿಂದ ಬೈಕ್ ಸವಾರ ಪಾರು: ಬೆಚ್ಚಿ ಬೀಳಿಸುತ್ತೆ ಸಿಸಿ ಕ್ಯಾಮೆರಾ ದೃಶ್ಯ