Asianet Suvarna News Asianet Suvarna News

ಸಾವಿನ ದವಡೆಯಿಂದ ಬೈಕ್ ಸವಾರ ಪಾರು: ಬೆಚ್ಚಿ ಬೀಳಿಸುತ್ತೆ ಸಿಸಿ ಕ್ಯಾಮೆರಾ ದೃಶ್ಯ

ಸಾವಿನ ದವಡೆಯಿಂದ ಬೈಕ್ ಸವಾರನೊಬ್ಬ ಅಚ್ಚರಿಯ ರೀತಿಯಲ್ಲಿ ಪಾರಾದ ಘಟನೆ ನಡೆದಿದ್ದು, ಲಕ್ ಅಂದ್ರೆ ಇದೇನಾ ಎಂಬಂತೆ ಆಗಿದೆ‌.

ಬೈಕ್ ಸವಾರನೊಬ್ಬ ಕ್ಷಣಾರ್ಧದಲ್ಲಿ ಬದುಕುಳಿದ ಘಟನೆ ಕುಣಿಗಲ್‌ ತಾಲ್ಲೂಕಿನ ಅಂಚೇಪಾಳ್ಯದಲ್ಲಿ ನಡೆದಿದೆ. ಮೈ ಜುಂ ಎನಿಸುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ ಆಗಿದೆ. ಬೈಕ್‌ನಲ್ಲಿ ಕುಳಿತು ಮಾತನಾಡುತ್ತಿದ್ದ ಯುವಕ ನಿಯಂತ್ರಣ ತಪ್ಪಿದ್ದು, ಬೈಕ್‌'ನತ್ತ ಕ್ಯಾಂಟರ್ ನುಗ್ಗಿದೆ. ರಸ್ತೆ ಬದಿಯಲ್ಲಿ ನಿಂತಿದ್ದ ಬೈಕ್‌ ಸವಾರ, ತನ್ನ ಪ್ರಾಣ ಉಳಿಸಿಕೊಂಡಿದ್ದಾನೆ. ಹಾಸನದಿಂದ ಬೆಂಗಳೂರು ಕಡೆ ಕ್ಯಾಂಟರ್‌ ಗಾಡಿ ಹೋಗುವಾಗ ಘಟನೆ ಸಂಭವಿಸಿದೆ.