Party Rounds: ಬಿಜೆಪಿ-ಜೆಡಿಎಸ್ ಮೈತ್ರಿಗೆ ಉಭಯ ಪಕ್ಷದಲ್ಲೂ ವಿರೋಧ

ಮೈತ್ರಿಗೆ ಜೆಡಿಎಸ್‌ನಲ್ಲೇ ವಿರೋಧ ವ್ಯಕ್ತವಾಗಿದೆ. ಹಾಗೂ ಬಿಜೆಪಿಯಲ್ಲೂ ಅಪಸ್ವರ ಕೇಳಿ ಬಂದಿದೆ ಅಂತ ಎನ್ನಲಾಗುತ್ತಿದೆ. ಹೀಗಾಗಿ ಎನ್‌ಡಿಎ ಮೈತ್ರಿ ಬಗ್ಗೆ ಜೆಡಿಎಸ್‌ನಲ್ಲಿ ಪರ ವಿರೋಧ ಚರ್ಚೆ ನಡೆಯುತ್ತಿದೆ. ಹೆಚ್‌ಡಿಕೆ ಸಭೆಯಲ್ಲಿ ಮೈತ್ರಿಗೆ ಕೆಲ ಜೆಡಿಎಸ್‌ ಶಾಸಕರು ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಇಂದಿನ ಸಭೆ ಭಾರೀ ಮಹತ್ವವನ್ನು ಪಡೆದುಕೊಂಡಿದೆ. 

First Published Jul 20, 2023, 9:02 PM IST | Last Updated Jul 20, 2023, 9:02 PM IST

ಬೆಂಗಳೂರು(ಜು.20): 2024 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಉಭಯ ಪಕ್ಷದಲ್ಲೂ ವಿರೋಧ ವ್ಯಕ್ತವಾಗಿದೆ. ಇಲ್ಲಿಯವರೆಗೆ ಬಿಜೆಪಿ-ಜೆಡಿಎಸ್ ಮೈತ್ರಿಗೆ ಎಚ್‌.ಡಿ. ದೇವೇಗೌಡರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇಂದು ದೇವೇಗೌಡರು ಫೈನಲ್‌ ಸಭೆಯನ್ನ ಕರೆದಿದ್ದಾರೆ. ಜೆಡಿಎಸ್‌ ಶಾಸಕರ ಅಭಿಪ್ರಾಯವನ್ನ ದೇವೇಗೌಡರು ಸಂಗ್ರಹಿಸಲಿದ್ದಾರೆ. ಆದರೆ, ಮೈತ್ರಿಗೆ ಜೆಡಿಎಸ್‌ನಲ್ಲೇ ವಿರೋಧ ವ್ಯಕ್ತವಾಗಿದೆ. ಹಾಗೂ ಬಿಜೆಪಿಯಲ್ಲೂ ಅಪಸ್ವರ ಕೇಳಿ ಬಂದಿದೆ ಅಂತ ಎನ್ನಲಾಗುತ್ತಿದೆ. ಹೀಗಾಗಿ ಎನ್‌ಡಿಎ ಮೈತ್ರಿ ಬಗ್ಗೆ ಜೆಡಿಎಸ್‌ನಲ್ಲಿ ಪರ ವಿರೋಧ ಚರ್ಚೆ ನಡೆಯುತ್ತಿದೆ. ಹೆಚ್‌ಡಿಕೆ ಸಭೆಯಲ್ಲಿ ಮೈತ್ರಿಗೆ ಕೆಲ ಜೆಡಿಎಸ್‌ ಶಾಸಕರು ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಇಂದಿನ ಸಭೆ ಭಾರೀ ಮಹತ್ವವನ್ನು ಪಡೆದುಕೊಂಡಿದೆ. 

Party Rounds: ಸೋಮವಾರ ದೆಹಲಿಗೆ ದೇವೇಗೌಡ, ಮೈತ್ರಿ ಮಾತುಕತೆ ಸಾಧ್ಯತೆ