ಎಚ್‌ಡಿಕೆ 'ದ್ವಿಪತ್ನಿತ್ವ' ಕೆದಕಿದ ಕಮಲ ಪಾಳಯ: 'ಬೈಗಮಿ' ಅಪರಾಧ ಅಲ್ವಾ ಎಂದು ಕುಟುಕಿದ ಬಿಜೆಪಿ

*  ಆರ್‌ಎಸ್‌ಎಸ್‌ ಹಾಗೂ ಮುಸ್ಲಿಂರ ಮತಗಳ ಬಗ್ಗೆ ಪ್ರಸ್ತಾಪ ಮಾಡಿದ ಕುಮಾರಸ್ವಾಮಿ
*  ಕುಮಾರಸ್ವಾಮಿ ವೈಯಕ್ತಿಕ ವಿಚಾರಕ್ಕೂ ಕೈಹಾಕಿದ ಬಿಜೆಪಿ
*  ಅತ್ಯಂತ ಕೆಳಮಟ್ಟಕ್ಕೆ ತಲುಪುತ್ತಿರುವ ಪ್ರಸ್ತಾಪವಾಗುತ್ತಿರುವ ಬಹುತೇಕ ವಿಚಾರಗಳು

Share this Video
  • FB
  • Linkdin
  • Whatsapp

ಬೆಂಗಳೂರು(ಅ.20): ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆಯ ಅಂಗಳದಲ್ಲಿ ಈಗ ಪ್ರಸ್ತಾಪವಾಗುತ್ತಿರುವ ಬಹುತೇಕ ಎಲ್ಲ ವಿಚಾರಗಳೂ ಕೂಡ ಅತ್ಯಂತ ಕೆಳಮಟ್ಟಕ್ಕೆ ತಲುಪುತ್ತಿವೆ. ಹೌದು, ಬಹುತೇಕ ಮೂರು ಪಕ್ಷಗಳ ನಾಯಕರು ಆಡುತ್ತಿರುವ ಮಾತುಗಳು, ಅವರು ಪ್ರಸ್ತಾಪ ಮಾಡುತ್ತಿರುವ ವಿಚಾರಗಳು ಜನರಿಗೆ ಯಾವ ಸಂದೇಶಗಳನ್ನ ಕೊಡಬೇಕಾಗಿತ್ತೋ ಅಂತಹ ಉತ್ತಮವಾದ ಸಂದೇಶಗಳನ್ನ ಕೊಡ್ತಾಯಿಲ್ಲ. ಬದಲಾಗಿ ನಕಾರಾತ್ಮಕವಾಗಿರುವಂತ ಸಂದೇಶಗಳನ್ನ ನೀಡುವಂತ ಹೇಳಿಕೆಗಳೇ ಬರುತ್ತಿವೆ.ಅದರಲ್ಲೂ ಮುಖ್ಯವಾಗಿ ಕುಮಾರಸ್ವಾಮಿ ಆರ್‌ಎಸ್‌ಎಸ್‌ ಹಾಗೂ ಮುಸ್ಲಿಂರ ಮತಗಳ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಇದೀಗ ಹೆಜ್ಜೆ ಮುಂದು ಹೋಗಿರುವ ಬಿಜೆಪಿ ಕುಮಾರಸ್ವಾಮಿ ಅವರ ವೈಯಕ್ತಿಕ ವಿಚಾರಗಳನ್ನೂ ಕೂಡ ಪ್ರಸ್ತಾಪ ಮಾಡುವಂತ ಪ್ರಯತ್ನ ನಡೆಯತ್ತಿದೆ. ಅದರಲ್ಲೂ ದ್ವಿಪತ್ನಿತ್ವ ವಿಚಾರವನ್ನೂ ಕೂಡ ಬಿಜೆಪಿ ಪ್ರಶ್ನೆ ಮಾಡಿದೆ. 

ಬೈಎಲೆಕ್ಷನ್‌ ಕದನ: ಸಿಂದಗಿಯಲ್ಲೇ ಬೀಡುಬಿಟ್ಟ ದಳಪತಿಗಳು..!

Related Video