Asianet Suvarna News Asianet Suvarna News

Assembly election: ಕಾಂಗ್ರೆಸ್ ಟಿಕೆಟ್ ಹಂಚಿಕೆಗೆ ಕಮಲ ತಂತ್ರ: ತ್ರಿಬಲ್ ರೈಡಿಂಗ್ ಗೆದ್ದವನೇ ಮಹಾಶೂರ

ಪ್ರಪಂಚ ಪ್ರಳಯ ಆದ್ರೂ ಸರಿ, ಕರ್ನಾಟಕವನ್ನು ಗೆದ್ದೇ ಸಿದ್ಧ ಅಂತ ಹೂಂಕರಿಸ್ತಾ ಇದ್ದಾರೆ ಕೈ ರಣಕಲಿಗಳು. ಕರ್ನಾಟಕ ಕುರುಕ್ಷೇತ್ರವನ್ನು ಗೆದ್ದು ಬೀಗಲು ಕೈ ಕಲಿಗಳು ಪ್ರತಿಜ್ಞೆಯನ್ನೂ ಮಾಡಿ ಬಿಟ್ಟಿದ್ದಾರೆ. ಅಷ್ಟಕ್ಕೂ ಏನಿದು ತ್ರಿಬಲ್ ರೈಡಿಂಗ್ ಟಿಕೆಟ್ ಸೂತ್ರ..? 

ಬೆಂಗಳೂರು (ಡಿ.22): ಪ್ರಪಂಚ ಪ್ರಳಯ ಆದ್ರೂ ಸರಿ, ಕರ್ನಾಟಕವನ್ನು ಗೆದ್ದೇ ಸಿದ್ಧ ಅಂತ ಹೂಂಕರಿಸ್ತಾ ಇದ್ದಾರೆ ಕೈ ರಣಕಲಿಗಳು. ಕರ್ನಾಟಕ ಕುರುಕ್ಷೇತ್ರವನ್ನು ಗೆದ್ದು ಬೀಗಲು ಕೈ ಕಲಿಗಳು ಪ್ರತಿಜ್ಞೆಯನ್ನೂ ಮಾಡಿ ಬಿಟ್ಟಿದ್ದಾರೆ. ಎಲೆಕ್ಷನ್ ಗೆಲ್ಬೇಕು ಅಂದ್ರೆ ಮೊದ್ಲು ಅಭ್ಯರ್ಥಿಗಳು ಯಾರು ಅನ್ನೋದು ಡಿಸೈಡ್ ಆಗ್ಬೇಕು. ಇದಕ್ಕೆ ಅಂತಾನೇ ಕೈ ಪಾಳೆಯದಲ್ಲಿ ರೆಡಿಯಾಗ್ತಿದೆ ತ್ರಿಬಲ್ ರೈಡಿಂಗ್ ಟಿಕೆಟ್ ಸೂತ್ರ. ಕಾಂಗ್ರೆಸ್ ಅಭ್ಯರ್ಥಿಗಳು ಯಾರು ಅನ್ನೋದನ್ನು ನಿರ್ಧಾರ ಮಾಡಲಿರೋದೇ ಆ ಸೂತ್ರ, ಆ ತಂತ್ರ. ಅಷ್ಟಕ್ಕೂ ಏನಿದು ತ್ರಿಬಲ್ ರೈಡಿಂಗ್ ಟಿಕೆಟ್ ಸೂತ್ರ..? ಇಲ್ಲಿದೆ ನೋಡಿ ಕೈ ಕೋಟೆಯಿಂದ ಸಿಡಿದು ಬಂದಿರೋ ಟಿಕೆಟ್ ಸೀಕ್ರೆಟ್.

ಕಾಂಗ್ರೆಸ್'ನಲ್ಲಿ ಟಿಕೆಟ್ ಹಂಚಿಕೆಗೆ ಸಮೀಕ್ಷೆಯೇ ಫೈನಲ್ ಮಾನದಂಡ ಅನ್ನೋದಾದ್ರೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಪಾತ್ರ ಏನು..? ಕೈ ಪಾಳೆಯದ ಹಿರಿಯ ನಾಯಕರ ಶಿಫಾರಸುಗಳಿಗೆ ಕಿಮ್ಮತ್ತೇ ಇಲ್ವಾ..? ಟಿಕೆಟ್ ಹಂಚಿಕೆ ವಿಚಾರವೇ ಕೈ ಕೋಟೆಯಲ್ಲಿ ಬಿರುಗಾಳಿ ಎಬ್ಬಿಸಲಿದ್ಯಾ..? ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಹಂಚಿಕೆಗೆ ಸಮೀಕ್ಷೆಗಳೇ ಫೈನಲ್ ಮಾನದಂಡ. ಹಾಗಾದ್ರೆ ರಾಜ್ಯ ಕಾಂಗ್ರೆಸ್'ನ ಡಿಸೈಡಿಂಗ್ ಫ್ಯಾಕ್ಟರ್'ಗಳಾದ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಪಾತ್ರ ಏನು..? ಕೈ ಪಾಳೆಯದ ಹಿರಿಯ ನಾಯಕರ ಶಿಫಾರಸುಗಳಿಗೆ ಕಿಮ್ಮತ್ತೇ ಇಲ್ವಾ..? ಟಿಕೆಟ್ ಹಂಚಿಕೆ ವಿಚಾರವೇ ಕೈ ಕೋಟೆಯಲ್ಲಿ ಬಿರುಗಾಳಿ ಎಬ್ಬಿಸಲಿದ್ಯಾ..? ಉತ್ತರ ಇಲ್ಲಿದೆ ನೋಡಿ.

ಟಿಕೆಟ್ ಯಾರಿಗೆ ಅನ್ನೋದು ಫೈನಲ್ ಆದ್ರೆ, ಘೋಷಣೆಯೊಂದೇ ಬಾಕಿ. ಅದಕ್ಕೂ ಕಾಂಗ್ರೆಸ್'ನಲ್ಲಿ ಮುಹೂರ್ತ ಫಿಕ್ಸ್ ಆಗಿದೆ. ಅಷ್ಟಕ್ಕೂ ಯಾವುದು ಆ ಮುಹೂರ್ತ?  ಕಾಂಗ್ರೆಸ್ ಟಿಕೆಟ್ ಫೈಟ್'ಗೆ ಬ್ರೇಕ್ ಹಾಕಲು ಸಮೀಕ್ಷೆಯ ಅಸ್ತ್ರ ಪ್ರಯೋಗಕ್ಕೆ ಹೈಕಮಾಂಡ್ ಮುಂದಾಗಿದೆ. ಟಿಕೆಟ್ ಘೋಷಣೆಗೂ ಕೈ ಪಾಳೆಯದಲ್ಲಿ ಮುಹೂರ್ತ ಫಿಕ್ಸ್ ಆಗಿದೆ. ಕಾಂಗ್ರೆಸ್'ನಲ್ಲಿ ಟಿಕೆಟ್ ಘೋಷಣೆ ಅನ್ನೋದೇ ಗಜಪ್ರಸವ ಇದ್ದ ಹಾಗೆ. ಒಂದಂತೂ ನಿಜ. ಈ ಬಾರಿ ಕೈ ಪಾಳೆಯ ಹೊಸ ತಂತ್ರದೊಂದಿಗೆ, ಹೊಸ ಲೆಕ್ಕಾಚಾರದೊಂದಿಗೆ ಟಿಕೆಟ್ ನೀಡಲು ಮುಂದಾಗಿದ್ದು, ಒಂದಷ್ಟು ಮಂದಿಗೆ ಅಚ್ಚರಿ, ಮತ್ತೊಂದಷ್ಟು ಮಂದಿಗೆ ಆಘಾತ ಶತಸಿದ್ಧ.

Video Top Stories