News Hour: ಬಿಜೆಪಿ ನೊಗ ಹಿಡಿದ ವಿಜಯೇಂದ್ರಗೆ ಲೋಕಸಭೆ ಎಲೆಕ್ಷನ್ ಟಾಸ್ಕ್!


BY Vijayendra Karnataka BJP Chief ಬಿಜೆಪಿ ಕೊನೆಗೂ ತನ್ನ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಿದೆ. ಬಿಎಸ್‌ ಯಡಿಯೂರಪ್ಪ ಅವರ ಪುತ್ರ ಶಿಕಾರಿಪುರದ ಶಾಸಕ ಬಿವೈ ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟಿದೆ. ಇಂದಿನಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಲಾಗಿದೆ.

First Published Nov 10, 2023, 11:14 PM IST | Last Updated Nov 10, 2023, 11:14 PM IST

ಬೆಂಗಳೂರು (ನ.10): ಬಿಜೆಪಿ ಹೈಕಮಾಂಡ್‌ ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರ ಪುತ್ರ ಹಾಗೂ ಶಿಕಾರಿಪುರದ ಶಾಸಕ ಬಿವೈ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರಾಗಿ ನೇಮಿಸಿದೆ.  ದೀಪಾವಳಿ ಸಂಭ್ರಮದಲ್ಲಿ ವಿಜಯೇಂದ್ರಗೆ ರಾಷ್ಟ್ರೀಯ ಬಿಜೆಪಿ ಭರ್ಜರಿ ಗಿಫ್ಟ್‌ ನೀಡಿದೆ. ಇಂದಿನಿಂದ ಜಾರಿಗೆ ಬರುವಂತೆ ಈ ಆದೇಶ ನೀಡಲಾಗಿದೆ.

ಇದರ ಬೆನ್ನಲ್ಲಿಯೇ ಅವರಿಗೆ ಮುಂದಿನ ದಾರಿ ಸದ್ಯಕ್ಕೆ ಅವರಿಲಿಗೆ ಸುಲಭವಾಗೇನೂ ಇಲ್ಲ ಎನ್ನುವ ವಿಶ್ಲೇಷಣೆ ಆರಂಭವಾಗಿದೆ. ವಿಜಯೇಂದ್ರಗೆ ಮೊದಲಿಗೆ ಬರುವುದು ಲೋಕಸಭೆ ಎಲೆಕ್ಷನ್ ಟಾಸ್ಕ್ ಈ ಬಾರಿ 25 ಲೋಕಸಭೆ ಸ್ಥಾನಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ಅವರ ಮೇಲಿದೆ. ಅದರೊಂದಿಗೆ ಜೆಡಿಎಸ್ ಜತೆ ಬಿಜೆಪಿ ಮೈತ್ರಿಗೆ ಧಕ್ಕೆಯಾಗದಂತೆ ಕಾರ್ಯನಿರ್ವಹಣೆ ಮಾಡಬೇಕಿದೆ. ರಾಜ್ಯದಲ್ಲಿ ಗೊಂದಲ ರಹಿತವಾಗಿ ಮೈತ್ರಿ ಮುಂದುವರಿಸುವ ಜವಾಬ್ದಾರಿ ಅವರ ಮೇಲಿರಲಿದೆ.

Breaking: ಬಿಎಸ್‌ವೈ ಪುತ್ರನಿಗೆ ದೀಪಾವಳಿ ಗಿಫ್ಟ್‌, ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ ನೇಮಕ!

ಇನ್ನು ಈಗಾಗಲೇ ಪಕ್ಷದೊಳಗಿನ ವಿರೋಧಿ ಪಡೆಯ ವಿಶ್ವಾಸ ಗಳಿಸಬೇಕಿದೆ. ಹಿರಿಯರು- ಕಿರಿಯ ಮಧ್ಯೆಯೂ ಸಮನ್ವಯತೆ ಕಾಪಾಡಬೇಕಾದ ತಲೆನೋವು ಎದುರಾಗಲಿದೆ. ಸೋಲು ಕಂಗಾಲಾಗಿರುವ ಕ್ಷೇತ್ರಗಳಲ್ಲಿ ಉತ್ಸಾಹ ತುಂಬಬೇಕು. ಎಲ್ಲ ಸಮುದಾಯಗಳನ್ನು ಒಟ್ಟಿಗೆ ಕೊಂಡೊಯ್ಯುವ ಜವಾಬ್ದಾರಿ. ವಿಧಾನಸಭೆಯಲ್ಲಿ ಸೋಲುಂಡ ಉತ್ತರ ಕರ್ನಾಟಕದಲ್ಲಿ ಪಕ್ಷ ಸಂಘಟನೆ. ಹಳೆ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ವೇಗ ನೀಡುವಂಥ ಕೆಲಸಗಳು ವಿಜಯೇಂದ್ರ ಅವರಿಂದ ಆಗಬೇಕಿದೆ.

Video Top Stories