ರೌಡಿಗಳೊಂದಿಗೆ ಕಾರ್ಯಕ್ರಮ: ಕಟೀಲ್‌ಗೆ ಸಮಜಾಯಿಷಿ ಕೊಟ್ಟ ಬಿಜೆಪಿ ಸಂಸದರು
ಕೇಸರಿ ಪಾಳ್ಯಕ್ಕೆ ರೌಡಿ ಶೀಟರ್‌ಗಳ ಪಕ್ಷ ಸಂಪರ್ಕ ತಲೆನೋವಾಗಿ ಪರಿಣಮಿಸಿದೆ. ಸಾರ್ವಜಿನಿಕರಿಂದ ವ್ಯಕ್ತವಾದ ಅಭಿಪ್ರಾಯಗಳಿಂದ ಬಿಜೆಪಿಗೆ ಸಂಕಷ್ಟ ಎದುರಾಗಿದೆ.
ರೌಡಿ ಶೀಟರ್'ಗಳೊಂದಿಗೆ ವೇದಿಕೆ ಹಂಚಿಕೊಂಡ ಸಂಸದರ ನಡೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಬೇಸರ ಮೂಡಿಸಿದೆ. ಈ ಕುರಿತು ಅವರು ವಿವರಣೆ ಕೇಳಿದ್ದು, ರಾಜ್ಯಾಧ್ಯಕ್ಷರಿಗೆ ಇಬ್ಬರು ಸಂಸದರು ಸಮಜಾಯಿಷಿ ಕೊಟ್ಟಿದ್ದಾರೆ. ಸಂಸದರು, ನಾಯಕರು ಕೊಟ್ಟ ವಿವರಣೆ ಕುರಿತು ಬಿಜೆಪಿ ನಾಯಕರ ಸಮಾಲೋಚನೆ ನಡೆದಿದ್ದು, ಪಕ್ಷದ ನಾಯಕರ ಸಲಹೆ ಬಳಿಕ ಕಟೀಲ್ ಸ್ಪಷ್ಟ ಸಂದೇಶ ನೀಡಲಿದ್ದಾರೆ. ಪಕ್ಷದ ಇಮೇಜ್'ಗೆ ಧಕ್ಕೆಯಿಂದ ಬಚಾವ್ ಆಗಲೂ ಕಾರ್ಯತಂತ್ರ ರೂಪಿಸಿದ್ದು, ಯಾರಿಗೆ ಯಾವ ಸಂದೇಶ ನೀಡಬೇಕು ಅನ್ನುವ ಬಗ್ಗೆ ನಿಲುವು ಪ್ರಕಟವಾಗಿದೆ. ಆಕ್ಷೇಪಾರ್ಹ ಹಿನ್ನೆಲೆ ವ್ಯಕ್ತಿಗಳಿಗೆ ಪಕ್ಷದ ಎಂಟ್ರಿಯಿಲ್ಲ ಎಂದು ಕಟೀಲ್ ಸ್ಪಷ್ಟನೆ ನೀಡಿದ್ದಾರೆ.