News Hour: ಸಂಸದ ಸುಧಾಕರ್ ದಂಗೆ.. ವಿಜಯೇಂದ್ರ ವಾಗ್ಯುದ್ಧ

ಬಿಜೆಪಿಯಲ್ಲಿ ವಿಜಯೇಂದ್ರ ವಿರೋಧಿಗಳ ಬಣ ಹೆಚ್ಚಾಗುತ್ತಿದೆ. ಜಿಲ್ಲಾಧ್ಯಕ್ಷರ ಆಯ್ಕೆ ಬೆನ್ನಲ್ಲೇ ಭಿನ್ನಮತ ಸ್ಫೋಟಗೊಂಡಿದೆ. ಸುಧಾಕರ್​ ರೋಷಾವೇಶ.. S.R ವಿಶ್ವನಾಥ್​, ಪ್ರೀತಂಗೌಡ ವಾಗ್ಯುದ್ಧ ನಡೆಸಿದ್ದಾರೆ.

Govindaraj S  | Published: Jan 30, 2025, 11:49 PM IST

ಬೆಂಗಳೂರು (ಜ.30): ಬಿಜೆಪಿಯಲ್ಲಿ ವಿಜಯೇಂದ್ರ ವಿರೋಧಿಗಳ ಬಣ ಹೆಚ್ಚಾಗುತ್ತಿದೆ. ಜಿಲ್ಲಾಧ್ಯಕ್ಷರ ಆಯ್ಕೆ ಬೆನ್ನಲ್ಲೇ ಭಿನ್ನಮತ ಸ್ಫೋಟಗೊಂಡಿದೆ. ಸುಧಾಕರ್​ ರೋಷಾವೇಶ.. S.R ವಿಶ್ವನಾಥ್​, ಪ್ರೀತಂಗೌಡ ವಾಗ್ಯುದ್ಧ ನಡೆಸಿದ್ದಾರೆ. ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದ ಡಾ ಕೆ ಸುಧಾಕರ್‌ ಅವರು  ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸುತ್ತಾ ಸಿದ್ದರಾಮಯ್ಯ ಬಗ್ಗೆ ಮಾತನಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ನನಗೆ ಅತ್ಯಂತ ಆಪ್ತರು, ಬಿಜೆಪಿ ಹೋಗುವಾಗ ನನಗೆ ಕರೆದು ಮಾತನಾಡಿದ್ದರು, ನೋಡಯ್ಯ ನೀನು ಬಿಜೆಪಿಗೆ ಹೋಗಬೇಡ ನಿನ್ನನ್ನು ಉಪಯೋಗಿಸಿ ಕೈ ಬಿಡ್ತಾರೆ ಎಂದು ಹೇಳಿದ್ದರು ಎಂದು ಅಂದಿನ ದಿನಗಳನ್ನು ನೆನೆಸಿಕೊಂಡರು. ಇನ್ನು ಸಂಸದ ಡಾ.ಕೆ.ಸುಧಾಕರ್‌ ಅವರು ಈ ರೀತಿ ಹೇಳಿಕೆ ಕೊಡುವುದು ಪಕ್ಷಕ್ಕೂ ಗೌರವ ತರುವುದಿಲ್ಲ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಬೇಕು. ನನ್ನ ನಡವಳಿಕೆಗಳನ್ನು ತಿದ್ದಿಕೊಳ್ಳಬೇಕು ಎಂದು ಹೇಳಿದ್ದಾರೆ. ತಪ್ಪುಗಳಿದ್ದರೆ ತಿದ್ದಿಕೊಳ್ಳಲು ನಾನು ಸಿದ್ಧ. ಸುಧಾಕರ್ ಅವರನ್ನು ಭೇಟಿ ಮಾಡುತ್ತೇನೆ. ನಾನೂ ಸಹ ತಿದ್ದಿಕೊಳ್ಳುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

Read More...