ಡ್ರಗ್ಸ್ ಮಾಫಿಯಾ: ನಟಿಯರ ಬಗ್ಗೆ ಬಿಜೆಪಿ ಶಾಸಕ ಸಾಫ್ಟ್ ಕಾರ್ನರ್, ಪೊಲೀಸರ ನಡೆಗೆ ಗರಂ

ಸಿಸಿಬಿ ಪೊಲೀಸರು ಮಾತ್ರ ಕೇವಲ ಸ್ಯಾಂಡಲ್‌ವುಡ್‌ ನಟಿಯರನ್ನು ತನಿಖೆ ನಡೆಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇದರ ಮಧ್ಯೆ ಈ ಬಗ್ಗೆ ಬಿಜೆಪಿ ವಿಧಾನಪರಿಷತ್ ಸದಸ್ಯರೊಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

First Published Sep 16, 2020, 8:23 PM IST | Last Updated Sep 16, 2020, 8:23 PM IST

ಬೆಂಗಳೂರು, (ಸೆ.16): ಸ್ಯಾಂಡಲ್‌ವುಡ್‌ ಡ್ರಗ್ಸ್‌ ಮಾಫಿಯಾ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಇನ್ನು ಈ ಪ್ರಕರಣದಲ್ಲಿ ರಾಜಕೀಯ ನಾಯಕರು ಮತ್ತು ಅವರ ಮಕ್ಕಳು ಇದ್ದಾರೆ ಎನ್ನುವ ಆರೋಪಗಳು ಕೇಳಿಬಂದಿದೆ.

ಡ್ರಗ್ಸ್ ದಂಧೆ ತನಿಖೆ ಬಗ್ಗೆ ಗೃಹ ಸಚಿವರ ಅಚ್ಚರಿ ಹೇಳಿಕೆ: ಹಾಗೆ ಹೇಳಲು ಇವೆ 4 ಪ್ರಮುಖ ಕಾರಣಗಳು

ಆದ್ರೆ, ಸಿಸಿಬಿ ಪೊಲೀಸರು ಮಾತ್ರ ಕೇವಲ ಸ್ಯಾಂಡಲ್‌ವುಡ್‌ ನಟಿಯರನ್ನು ತನಿಖೆ ನಡೆಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇದರ ಮಧ್ಯೆ ಈ ಬಗ್ಗೆ ಬಿಜೆಪಿ ವಿಧಾನಪರಿಷತ್ ಸದಸ್ಯರೊಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದು, ಕೇವಲ‌ ಒಂದೇ ವರ್ಗದವರನ್ನು ಕರೆ ತಂದು ತನಿಖೆ ಮಾಡ್ತಿರೋದನ್ನು ಸಮಾಜ ಪ್ರಶ್ನೆ ಮಾಡ್ತಿದೆ. ಅದೂ‌ ಕೂಡಾ ಹೆಣ್ಣು ಮಕ್ಕಳನ್ನೇ. ಇದರಲ್ಲಿ ಕೈಗಾರಿಕೋದ್ಯಮಿಗಳು, ರಾಜಕಾರಣಿಗಳ‌ ಮಕ್ಕಳು ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.