Asianet Suvarna News Asianet Suvarna News

ನಾನು ಹಿಂದೂ ಅಂತಾ ಹೇಳ್ತಾರೆ, ಆದ್ರೆ ಕೇಸರಿ ಟೋಪಿ ಮಾತ್ರ ಬೇಡ ಅಂತಾರೆ!

ಬಿಜೆಪಿ ಶಾಸಕ ಸಿಟಿ ರವಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಮತ್ತೆ ಕಿಡಿಕಾರಿದ್ದಾರೆ. ಸಿದ್ಧರಾಮಯ್ಯ ತಾವು ಹಿಂದೂ ಎಂದು ಹೇಳಿಕೊಳ್ಳುತ್ತಾರೆ. ಆದರೆ, ಕೇಸರಿ ಕಂಡರೆ, ಕೇಸರಿ ಟೋಪಿ ಕಂಡರೆ ದ್ವೇಷ ಸಾಧಿಸುತ್ತಾರೆ ಎಂದು ಹೇಳಿದ್ದಾರೆ.

ಬೆಂಗಳೂರು (ಏ.22): ಮಾಜಿ ಸಿಎಂ ಸಿದ್ಧರಾಮಯ್ಯ (siddaramaiah) ವಿರುದ್ಧ ಸಿಟಿ ರವಿ (CT Ravi) ವಾಗ್ದಾಳಿ ನಡೆಸಿದ್ದಾರೆ. ಸಿದ್ಧರಾಮಯ್ಯ ತಾನೂ ಕೂಡ ಹಿಂದು ಎಂದು ಹೇಳ್ತಾರೆ. ಆದರೆ, ಸಿದ್ಧರಾಮಯ್ಯಗೆ ಕೇಸರ ಟೋಪಿ (saffron cap) ಮಾತ್ರ ಬೇಡ ಎಂದು ಹೇಳಿದ್ದಾರೆ.

ಸಿದ್ಧರಾಮಯ್ಯ ಅವರಿಗೆ ಕುಂಕುಮ ಇಟ್ಟವರನ್ನು ಕಂಡರೆ ಹೆದರಿಗೆ ಆಗುತ್ತದೆ. ನಮ್ಮ ತಾಯಂದಿರು ಕುಂಕುಮ ಇಟ್ಟುಕೊಳ್ಳುತ್ತಾರೆ. ಕುಂಕುಮ ಇಟ್ಟುಕೊಂಡವರು ಯಾರಾದರೂ ಬಾಂಬ್ ಹಾಕಿದ್ದಾರೆಯೇ ಎಂದು ಪ್ರಶ್ನೆ ಮಾಡಿದ್ದಾರೆ. ಕೇಸರಿ ಟೋಪಿ ಹಾಕೋಕೆ ಬಂದ್ರೆ ಕಿತ್ತು ಹಾಕಿದ್ರು, ಕೇಸರಿ ಪೇಟ ತೊಟ್ಟವರು ಯಾರೂ ಬಾಂಬ್ ಹಾಕಿಲ್ಲ. ಕೇಸರಿ ಶಾಲು ಹಾಕಿಕೊಂಡವರು ಭಾರತ್ ಮಾತಾ ಕಿ ಜೈ ಎಂದು ಹೇಳುತ್ತಾರೆ ಎಂದರು.

ಉಳ್ಳಾಲ 'ಹಿಂದೂ ಶಾಸಕ' ಅಭಿಯಾನ: ಫೀಲ್ಡಿಗಿಳಿದ VHPಗೆ ಖಾದರ್ ತಿರುಗೇಟು!

ತಪ್ಪು ಮಾಡಿದವರನ್ನು ತಲೆ ಮೇಲೆ ಕೂರಿಸಿಕೊಳ್ಳುವ ಜನ ನಾವಲ್ಲ. ಅಖಂಡ ಶ್ರೀನಿವಾಸ ಮೂರ್ತಿ ಮನೆ ಮೇಲೆ ದಾಳಿ ಬಗ್ಗೆ ಕಾಂಗ್ರೆಸ್ ಪಕ್ಷದ ನಿಲುವೇನು? ತಪ್ಪು ಮಾಡಿದವರು ನೀರು ಕುಡಿಯಲೇ ಬೇಕು, ಶಿಕ್ಷೆ ಆಗಲೇ ಬೇಕು. ತಪ್ಪು ಮಾಡಿದರು ವೋಟಿನಾಸೆಗೆ ಓಲೈಸೋ ಕಾಲವಿಲ್ಲ. ಶ್ರೀರಾಮ ನವಮಿಯಂದು ಯಾಕೆ ಕಲ್ಲು ಎಸೆಯುತ್ತಾರೆ. ನಾವು ಏನಾದ್ರು ಅವರ ಮೆರವಣಿಗೆ ವೇಳೆ ಕಲ್ಲು ಹಾಕ್ತೀವಾ? ಎಂದು ಪ್ರಶ್ನೆ ಮಾಡಿದರು.

Video Top Stories