ಸಚಿವ ನಾರಾಯಣಗೌಡ ಜೊತೆ ಗಲಾಟೆಗೆ ಶಾಸಕ ಬೆಳ್ಳಿ ಪ್ರಕಾಶ್ ಪ್ರತಿಕ್ರಿಯೆ..!

ಇಂದು (ಸೋಮವಾರ) ಮಧ್ಯಾಹ್ನ ವಿಧಾನಸಭೆ ಸೆಂಟ್ರಲ್ ಹಾಲ್ ಲಾಂಜ್ ನಲ್ಲಿ ನಡೆದ  ಜಗಳ ಬಗ್ಗೆ ಶಾಸಕ ಬೆಳ್ಳಿ ಪ್ರಕಾಶ್ ಮಾಧ್ಯಮದವರ ಎದುರು ಒಂದೆರಡು ಮಾತುಗಳನ್ನಾಡಿ ನುಣುಚಿಕೊಂಡರು. 

First Published Sep 21, 2020, 5:12 PM IST | Last Updated Sep 21, 2020, 5:12 PM IST

ಬೆಂಗಳೂರು, (ಸೆ.21): ಇಂದು (ಸೋಮವಾರ) ಮಧ್ಯಾಹ್ನ ವಿಧಾನಸಭೆ ಸೆಂಟ್ರಲ್ ಹಾಲ್ ಲಾಂಜ್ ನಲ್ಲಿ ಕಡೂರು ಬಿಜೆಪಿ ಶಾಸಕ ಬೆಳ್ಳಿ ಪ್ರಕಾಶ್ ಮತ್ತು ಸಚಿವ ನಾರಾಯಣಗೌಡ ನಡುವೆ ಗಲಾಟೆಯಾಗಿದ್ದು, ಅದು ಕೈ-ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. 

ವಿಧಾನಸಭೆಯಲ್ಲಿ ಹೊಡೆದಾಟಕ್ಕೆ ಮುಂದಾದ ಶಾಸಕ-ಸಚಿವ: ಅಸಲಿ ಕಾರಣ ಇಲ್ಲಿದೆ

ಬಳಿಕ ಇನ್ನುಳಿದ ಶಾಸಕರು, ಸಚಿವರು ಸಮಾಧಾನಪಡಿಸಿ ಕಳುಹಿಸಿದರು.  ಇನ್ನು ಈ ಜಗಳ ಬಗ್ಗೆ ಶಾಸಕ ಬೆಳ್ಳಿ ಪ್ರಕಾಶ್ ಮಾಧ್ಯಮದವರ ಎದುರು ಒಂದೆರಡು ಮಾತುಗಳನ್ನಾಡಿ ನುಣುಚಿಕೊಂಡರು.