ಸಿಎಂ ಮಾಡಲಿಲ್ಲ, ಮಂತ್ರಿಗಿರಿಯಾದರೂ ಕೊಡ್ರಿ, ವರಿಷ್ಠರ ಮುಂದೆ ಬೆಲ್ಲದ್ ಅಳಲು.!

ಸಿಎಂ ಅಂತೂ ಮಾಡಲಿಲ್ಲ, ಮಂತ್ರಿಯನ್ನಾದ್ರೂ ಮಾಡಿ. ಸಚಿವ ಸ್ಥಾನವೂ ಸಿಗದಿದ್ರೆ ಹೇಗೆ ಮುಖ ತೋರಿಸಲಿ..? ಎಂದು ವರಿಷ್ಠರ ಎದುರು ಅರವಿಂದ್ ಬೆಲ್ಲದ್ ಅಳಲು ತೋಡಿಕೊಂಡಿದ್ದಾರೆ. 

First Published Aug 3, 2021, 1:01 PM IST | Last Updated Aug 3, 2021, 1:01 PM IST

ಬೆಂಗಳೂರು (ಆ. 03): ಸಿಎಂ ಅಂತೂ ಮಾಡಲಿಲ್ಲ, ಮಂತ್ರಿಯನ್ನಾದ್ರೂ ಮಾಡಿ. ಸಚಿವ ಸ್ಥಾನವೂ ಸಿಗದಿದ್ರೆ ಹೇಗೆ ಮುಖ ತೋರಿಸಲಿ..? ಎಂದು ವರಿಷ್ಠರ ಎದುರು ಅರವಿಂದ್ ಬೆಲ್ಲದ್ ಅಳಲು ತೋಡಿಕೊಂಡಿದ್ದಾರೆ. 

ಸಿಎಂ ಸ್ಥಾನಕ್ಕೆ ನನ್ನ ಹೆಸರು ಬಲವಾಗಿ ಕೇಳಿ ಬಂದಿತ್ತು. ಈಗ ಮಂತ್ರಿ ಮಾಡದಿದ್ರೆ ಜನರಿಗೆ ಹೇಗೆ ಮುಖ ತೋರಿಸಲಿ..? ಮಂತ್ರಿ ಆಗಲ್ಲ ಎಂದು ಶೆಟ್ಟರ್ ಈಗಾಗಲೇ ಹೇಳಿದ್ದಾರೆ. ಶೆಟ್ಟರ್ ಸ್ಥಾನವನ್ನು ನನಗೆ ಕೊಡಿ ಎಂದು ಬೆಲ್ಲದ್ ವರಿಷ್ಠರ ಮುಂದೆ ಅಳಲು ತೋಡಿಕೊಂಡಿದ್ದಾರೆ. ಬೆಲ್ಲದ್ ಅಥವಾ ಮುನೇನಕೊಪ್ಪ ಅವರಿಗೆ ಮಂತ್ರಿಸ್ಥಾನ ಸಿಗುವ ಸಾಧ್ಯತೆ ಇದೆ.