Asianet Suvarna News Asianet Suvarna News

ಮುಂದಿನ ಸಾರಿಯೂ ಅಧಿಕಾರಕ್ಕೇರಲು ಬಿಎಸ್‌ವೈಗೆ ಹಿರಿಯ ಶಾಸಕ ಕೊಟ್ಟ ಮಾಸ್ಟರ್ ಪ್ಲಾನ್!

ಪಕ್ಷ ಮತ್ತು ಬಿಎಸ್ ಯಡಿಯೂರಪ್ಪ ವಿರುದ್ಧ ಮಾತನಾಡಿದ ಹಿರಿಯ ಶಾಸಕ/ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಅಪ್ಪಚ್ಚು ರಂಜನ್ ಅಸಮಾಧಾನ/ ಬಿಎಸ್ ವೈ ವಿರುದ್ಧ ಮಾತನಾಡಿದ ಹಿರಿಯ ಶಾಸಕ

ಕೊಡಗು(ಫೆ. 07)  ಹರಸಾಹಸ ಮಾಡಿ ಸಿಎಂ ಬಿಎಸ್ ಯಡಿಯೂರಪ್ಪ ಸಚಿವ ಸಂಪುಟ ವಿಸ್ತರಣೆ ಮಾಡಿದ್ದಾರೆ.  ಆದರೆ ಇದೀಗ ಪಕ್ಷದ ವಿರುದ್ಧ ಹಿರಿಯ ಶಾಸಕರೊಬ್ಬರು ಹಿರಿಯರನ್ನು ಮರೆಯಬೇಡಿ ಎಂದು ಬಿಎಸ್ ಯಡಿಯೂರಪ್ಪ ಅವರಿಗೆ ತಿರುಗೇಟು ನೀಡಿದ್ದಾರೆ.

ಮೂಲ ಬಿಜೆಪಿಗರೆ ಮಂತ್ರಿಗಿರಿ ಸಿಕ್ಕಿಲ್ಲ. ಕೊಡಗಿನ ಅಪ್ಪಚ್ಚು ರಂಜನ್ ಈ ಬಗ್ಗೆ ಮಾತನಾಡಿದ್ದು ಕೊಡಗಿನ ಜನ ಹೋರಾಟಕ್ಕೆ ಸಿದ್ಧರಿದ್ದಾರೆ.  ಆದರೆ ನಾನೇ ಬೇಡ ಎಂದು ತಡೆದಿದ್ದೇನೆ ಎಂದು ಹೇಳಿದ್ದೇನೆ ಎಂದಿದ್ದಾರೆ.