ಮಾಜಿ ಸ್ಪೀಕರ್ ರಮೇಶ್​ ಕುಮಾರ್​ ಆ ಒಂದು ಪದ ಬಳಸಿದ್ದಕ್ಕೆ ಸದನ ಅಲ್ಲೋಲ-ಕಲ್ಲೋಲ

ಕೊರೋನಾ ಭ್ರಷ್ಟಾಚಾರದ ಕುರಿತಾಗಿ ಬುಧವಾರ ಸದನದಲ್ಲಿ ನಿಯಮ 69 ರ ಅಡಿಯಲ್ಲಿ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಬಳಕೆಯಾದ ಮಾಜಿ ಸ್ಪೀಕರ್ ರಮೇಶ್​ ಕುಮಾರ್​ ಅವರು ಬಳಸಿದಂತ ಆ ಒಂದು ಪದ  ಸದನದಲ್ಲಿ ಕೋಲಾಹಲವನ್ನೇ ಸೃಷ್ಟಿ ಮಾಡಿತು.

First Published Sep 23, 2020, 4:50 PM IST | Last Updated Sep 23, 2020, 4:50 PM IST

ಬೆಂಗಳೂರು, (ಸೆ.23): : ಕೊರೋನಾ ಭ್ರಷ್ಟಾಚಾರದ ಕುರಿತಾಗಿ ಬುಧವಾರ ಸದನದಲ್ಲಿ ನಿಯಮ 69 ರ ಅಡಿಯಲ್ಲಿ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಬಳಕೆಯಾದ ಮಾಜಿ ಸ್ಪೀಕರ್ ರಮೇಶ್​ ಕುಮಾರ್​ ಅವರು ಬಳಸಿದಂತ ಆ ಒಂದು ಪದ  ಸದನದಲ್ಲಿ ಕೋಲಾಹಲವನ್ನೇ ಸೃಷ್ಟಿ ಮಾಡಿತು.

ಸದನದಲ್ಲಿ ಮಾಜಿ ಸಿಎಂ ಪುತ್ರನಿಗೆ ಸ್ಪೀಕರ್ ವಾರ್ನ್...!

ಕೊರೋನಾ ಭ್ರಷ್ಟಾಚಾರ ಕುರಿತ ಆರೋಪಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಸಚಿವ ಸುಧಾಕರ್ ಉತ್ತರ ಕೊಡುತ್ತಿದ್ದ ಸಂದರ್ಭದಲ್ಲಿ ಮಧ್ಯಪ್ರವೇಶ ಮಾಡಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಆ ಒಂದು ಪದ ಬಳಿಸಿದರು. ಕೂಡಲೇ ಬಿಜೆಪಿ ನಾಯಕರು ರಮೇಶ್ ಕುಮಾರ್‌ ಮೇಲೆ ಮುಗಿಬಿದ್ದರು. ಅಷ್ಟಕ್ಕೂ ರಮೇಶ್ ಕುಮಾರ್ ಹೇಳಿದ್ದೇನು..?