ಕ್ಷೇತ್ರ ಹುಡುಕಾಟದಲ್ಲಿರುವ ಸಿದ್ದರಾಮಯ್ಯ ಮೇಲೆ ಶ್ರೀರಾಮುಲುಗೆ ಸಾಫ್ಟ್ ಕಾರ್ನರ್..!
ಕಳೆದ ಬಾರಿ ಬಾದಾಮಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಿದ್ದ ಸಚಿವ ಶ್ರೀರಾಮುಲುಗೆ ಈಗ ಮಾಜಿ ಸಿಎಂ ಮೇಲೆ ಸಾಫ್ಟ್ ಕಾರ್ನರ್ ಬಂದಿದೆ.
ಕರ್ನಾಟಕ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದರೂ ಮಾಜಿ ಸಿಎಂ ಸಿದ್ದರಾಮಯ್ಯ ಇನ್ನೂ ಕ್ಷೇತ್ರ ಹುಡುಕಾಟದಲ್ಲಿದ್ದಾರೆ ಎಂಬ ವರದಿಗಳು ಕೇಳಿಬರುತ್ತಿವೆ. ಇನ್ನು, ಕಳೆದ ಬಾರಿ ಬಾದಾಮಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಿದ್ದ ಸಚಿವ ಶ್ರೀರಾಮುಲುಗೆ ಈಗ ಮಾಜಿ ಸಿಎಂ ಮೇಲೆ ಸಾಫ್ಟ್ ಕಾರ್ನರ್ ಬಂದಿದೆ. ಅನಿವಾರ್ಯ ಕಾರಣಕ್ಕೆ ನಾವಿಬ್ಬರೂ ಕ್ಷೇತ್ರ ಬಿಟ್ಟೆವು. ಕಳೆದ ಬಾರಿ ಸಾಹಸ ಮಾಡಿದ್ವಿ. ಸಿದ್ದರಾಮಯ್ಯನವರು ಮಗನ ಭವಿಷ್ಯಕ್ಕಾಗಿ ಕ್ಷೇತ್ರದ ಅಲೆದಾಟ ನಡೆಸುತ್ತಿದ್ದಾರೆ. ಅವರು ವರುಣಾ ಕ್ಷೇತ್ರದಿಂದಲೂ ಸ್ಪರ್ಧಿಸಲ್ಲ ಎಂದು ಬಳ್ಳಾರಿಯಲ್ಲಿ ಸಚಿವ ಶ್ರೀರಾಮುಲು ಹೇಳಿದ್ದಾರೆ.