'ನೆಹರೂ ಹುಕ್ಕಾ ಸೇದುತ್ತಿದ್ದು ತಪ್ಪೋ, ಸಿ.ಟಿ.ರವಿ ಹೇಳಿದ್ದು ತಪ್ಪೋ?'

'ಹುಕ್ಕಾ ಬಾರ್‌ ಬಗ್ಗೆ ನಾನು ಮಾತನಾಡಿದ್ದಕ್ಕೆ ಕಾಂಗ್ರೆಸ್‌ನವರಿಗೆ ಉರಿ ಹತ್ತಿಕೊಂಡಿದೆ. ನೆಹರೂ ಹುಕ್ಕಾ ಸೇದುತ್ತಿದ್ದು ತಪ್ಪೋ, ಸಿ.ಟಿ.ರವಿ ಹೇಳಿದ್ದು ತಪ್ಪೋ? ನಾನು ಹೇಳಿದ್ದು ತಪ್ಪು ಎನ್ನುವುದಾದರೆ, ನೆಹರೂ ಸೇದಿದ್ದು ತಪ್ಪಲ್ಲವೇ?' ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರಶ್ನಿಸಿದರು.

First Published Aug 13, 2021, 6:25 PM IST | Last Updated Aug 13, 2021, 6:25 PM IST

ಚಿಕ್ಕಮಗಳೂರು, (ಆ.13): 'ಹುಕ್ಕಾ ಬಾರ್‌ ಬಗ್ಗೆ ನಾನು ಮಾತನಾಡಿದ್ದಕ್ಕೆ ಕಾಂಗ್ರೆಸ್‌ನವರಿಗೆ ಉರಿ ಹತ್ತಿಕೊಂಡಿದೆ. ನೆಹರೂ ಹುಕ್ಕಾ ಸೇದುತ್ತಿದ್ದು ತಪ್ಪೋ, ಸಿ.ಟಿ.ರವಿ ಹೇಳಿದ್ದು ತಪ್ಪೋ? ನಾನು ಹೇಳಿದ್ದು ತಪ್ಪು ಎನ್ನುವುದಾದರೆ, ನೆಹರೂ ಸೇದಿದ್ದು ತಪ್ಪಲ್ಲವೇ?' ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರಶ್ನಿಸಿದರು.

ಇಂದಿರಾ, ನೆಹರು ಹೆಸರಲ್ಲಿ ಬಾರ್‌ ತೆರೆಯಲಿ: ರವಿ

ಇಂದು (ಆ.13) ಸುದ್ದಿಗಾರರೊಂದಿಗೆ ಮಾತನಾಡಿ, 'ನೆಹರೂ, ಇಂದಿರಾಗಾಂಧಿ ಬಗ್ಗೆ ನಾನು ಮಾತನಾಡಿರುವುದನ್ನು ತಪ್ಪು ಎಂದು ಹೇಳುತ್ತಿರುವ ಸಿದ್ದರಾಮಯ್ಯ ಅವರು ಇಂದಿರಾಗಾಂಧಿ ಬಗ್ಗೆ ಮಾತನಾಡಿರುವ ಹಳೆಯ ಭಾಷಣಗಳ ಪ್ರತಿಗಳನ್ನು ಹಾಕಿಸ್ಲಾ? ಸಿ.ಎಂ.ಇಬ್ರಾಹಿಂ ಅವರು ಇಂದಿರಾಗಾಂಧಿ ಅವರನ್ನು ಏನೆಂದು ಕರೆದಿದ್ದರು ಎಂದು ಹೇಳ್ಲಾ? ನಾನು ಆ ಮಟ್ಟಕ್ಕೆ ಇಳಿದಿಲ್ಲ' ಎಂದು ಸಮರ್ಥಿಸಿಕೊಂಡರು.

'ಟ್ವೀಟ್‌ಗಳನ್ನು ಗಮನಿಸಿದ್ದೇನೆ. ಸಂಸ್ಕೃತಿ ಮೀರಿ ನನ್ನ ವಿರುದ್ಧ ಮಾತನಾಡಿದ್ದಾರೆ. ನಾನು ಕುಡುಕನಲ್ಲ, ಆ ಪಟ್ಟ ಕಟ್ಟಿದ್ದಾರೆ. ಆದರೆ, ದಿನಾ ಕುಡಿಯುವವರು ಅವರೇ. ಅವರ ಹಳೆ ಕತೆಗಳನ್ನೆಲ್ಲ ಹೇಳಬೇಕಾ? ನಾನು ಆರ್‌ಎಸ್‌ಎಸ್‌ ಸ್ವಯಂ ಸೇವಕ, ಕೊತ್ವಾಲ ರಾಮಚಂದ್ರನ ಶಿಷ್ಯ ಅಲ್ಲ' ಎಂದು ಮಾರ್ಮಿಕವಾಗಿ ನುಡಿದರು.