ಕೇರ್ ಮಾಡದ ಬಿಜೆಪಿ ಲೀಡರ್ಸ್ ಖಡಕ್ ಎಚ್ಚರಿಕೆ : ಥಂಡಾ ಹೊಡೆದ ಆನಂದ್‌ ಸಿಂಗ್‌

ಆನಂದ್‌ ಸಿಂಗ್‌ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಖಡಕ್ ಸೂಚನೆ ನೀಡಿದರು. ನಳಿನ್ ಭೇಟಿ ವೇಳೆ ಸೂಚನೆ ನೀಡಿದ್ದು, ನಿಮ್ಮ ಈ ನಡೆಯನ್ನು ಪಕ್ಷ ಸಹಿಸೋದಿಲ್ಲ ಎಂದರು. ನೋಡಿ ನೀವು ಒಳ್ಳೆಯವರು ಇದ್ದೀರಿ. ಮುಂದೆ ಒಳ್ಳೆಯದು ಆಗುತ್ತದೆ. ಈ ರೀತಿ ರಾಜೀನಾಮೆ ಕೊಡ್ತೇನೆ ಎಂದೆಲ್ಲಾ ಸಮಯದಲ್ಲಿ ಮಾತಾಡಬೇಡಿ ಎಂದ ಕಟೀಲ್ ಮಾತು ಮನಮುಟ್ಟಿದಂತಾಗಿದೆ.  ಕೊನೆಗೂ ಅಸಮಾಧಾನಗೊಂಡಿದ್ದ ಅವರು ಅಧಿಕಾರ ಸ್ವೀಕಾರ ಮಾಡಿದರು.  

 ಇನ್ನು ಕಟೀಲ್ ಭೇಟಿಗೂ ಮುನ್ನ ರಾಜುಗೌಡ ಮಾತುಕತೆ ನಡೆಸಿ ನಿನಗೆ ಏನ್ ಅನ್ಯಾಯ ಆಗಿದೆ. ನಮಗೆ ಆದಷ್ಟು ಅನ್ಯಾಯ ಆಗಿದೆಯಾ ಮಂತ್ರಿ ಮಾಡಿದ್ದಾರೆ ಅಷ್ಟು ಸಾಲದಾ. ರಾಜಕೀಯ ಜೀವನ ಹಾಳ್ ಮಾಡ್ಕೊತೀಯಾ ನೀನು ಎಂದು ಎಚ್ಚರಿಕೆ ನೀಡಿದರು. ಇನ್ನು ಸಿಎಂ ಭೇಟಿ ವೇಳೆಯೂ ಅಸಮಾಧಾನಕ್ಕೆ ಸೊಪ್ಪು ಹಾಕಲಿಲ್ಲ.  ನೋಡಪ್ಪ, ನಾನು ಹೈಕಮಾಂಡ್ ಏನ್ ಹೇಳತ್ತೊ ಹಾಗೆ ಮಾಡುತ್ತೇನೆ. ಹೈಕಮಾಂಡ್ ಖಾತೆ ಬದಲಾವಣೆ ಮಾಡಿ ಅಂದರೆ ಮಾಡುತ್ತೇನೆ. ಇಲ್ಲವಾದರೆ ಮಾಡಲ್ಲ. ನನ್ನ ನಿರ್ಧಾರ ಇಷ್ಟೇ. ಇದನ್ನೆಲ್ಲಾ ಹೈಕಮಾಂಡ್ ಗಮನಕ್ಕೆ ತರುತ್ತೇನೆ. ನೀನು ಹೋಗಿ ಅಧಿಕಾರ ಸ್ವೀಕಾರ ಮಾಡು ಎಂದು ಆನಂದ್ ಸಿಂಗ್ ಗೆ ಸಿಎಂ ಬೊಮ್ಮಾಯಿ ಸ್ಪಷ್ಟ ಸೂಚನೆ ನೀಡಿದ್ದು ಕೊನೆಗೂ ಅಧಿಕಾರ ಸ್ವೀಕರಿಸಿದರು.  

First Published Aug 24, 2021, 2:44 PM IST | Last Updated Aug 24, 2021, 2:59 PM IST

ಬೆಂಗಳೂರು (ಆ.24): ಆನಂದ್‌ ಸಿಂಗ್‌ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಖಡಕ್ ಸೂಚನೆ ನೀಡಿದರು. ನಳಿನ್ ಭೇಟಿ ವೇಳೆ ಸೂಚನೆ ನೀಡಿದ್ದು, ನಿಮ್ಮ ಈ ನಡೆಯನ್ನು ಪಕ್ಷ ಸಹಿಸೋದಿಲ್ಲ ಎಂದರು. ನೋಡಿ ನೀವು ಒಳ್ಳೆಯವರು ಇದ್ದೀರಿ. ಮುಂದೆ ಒಳ್ಳೆಯದು ಆಗುತ್ತದೆ. ಈ ರೀತಿ ರಾಜೀನಾಮೆ ಕೊಡ್ತೇನೆ ಎಂದೆಲ್ಲಾ ಸಮಯದಲ್ಲಿ ಮಾತಾಡಬೇಡಿ ಎಂದ ಕಟೀಲ್ ಮಾತು ಮನಮುಟ್ಟಿದಂತಾಗಿದೆ.  ಕೊನೆಗೂ ಅಸಮಾಧಾನಗೊಂಡಿದ್ದ ಅವರು ಅಧಿಕಾರ ಸ್ವೀಕಾರ ಮಾಡಿದರು.  

ಆನಂದ ಸಿಂಗ್‌ ಅಧಿಕಾರ : ನೀವುಂಟು, ಅವರುಂಟು ಎಂದ ಸಿಎಂ ಬೊಮ್ಮಾಯಿ

 ಇನ್ನು ಕಟೀಲ್ ಭೇಟಿಗೂ ಮುನ್ನ ರಾಜುಗೌಡ ಮಾತುಕತೆ ನಡೆಸಿ ನಿನಗೆ ಏನ್ ಅನ್ಯಾಯ ಆಗಿದೆ. ನಮಗೆ ಆದಷ್ಟು ಅನ್ಯಾಯ ಆಗಿದೆಯಾ ಮಂತ್ರಿ ಮಾಡಿದ್ದಾರೆ ಅಷ್ಟು ಸಾಲದಾ. ರಾಜಕೀಯ ಜೀವನ ಹಾಳ್ ಮಾಡ್ಕೊತೀಯಾ ನೀನು ಎಂದು ಎಚ್ಚರಿಕೆ ನೀಡಿದರು. ಇನ್ನು ಸಿಎಂ ಭೇಟಿ ವೇಳೆಯೂ ಅಸಮಾಧಾನಕ್ಕೆ ಸೊಪ್ಪು ಹಾಕಲಿಲ್ಲ.  ನೋಡಪ್ಪ, ನಾನು ಹೈಕಮಾಂಡ್ ಏನ್ ಹೇಳತ್ತೊ ಹಾಗೆ ಮಾಡುತ್ತೇನೆ. ಹೈಕಮಾಂಡ್ ಖಾತೆ ಬದಲಾವಣೆ ಮಾಡಿ ಅಂದರೆ ಮಾಡುತ್ತೇನೆ. ಇಲ್ಲವಾದರೆ ಮಾಡಲ್ಲ. ನನ್ನ ನಿರ್ಧಾರ ಇಷ್ಟೇ. ಇದನ್ನೆಲ್ಲಾ ಹೈಕಮಾಂಡ್ ಗಮನಕ್ಕೆ ತರುತ್ತೇನೆ. ನೀನು ಹೋಗಿ ಅಧಿಕಾರ ಸ್ವೀಕಾರ ಮಾಡು ಎಂದು ಆನಂದ್ ಸಿಂಗ್ ಗೆ ಸಿಎಂ ಬೊಮ್ಮಾಯಿ ಸ್ಪಷ್ಟ ಸೂಚನೆ ನೀಡಿದ್ದು ಕೊನೆಗೂ ಅಧಿಕಾರ ಸ್ವೀಕರಿಸಿದರು.  

Video Top Stories