Fuel Price Hike 'ಬೆಲೆ ಏರಿಕೆ ಮೂಲಕ ಬಿಜೆಪಿ ಸರ್ಕಾರ ಪಿಕ್ ಪಾಕೆಟ್'

ಬರೋಬ್ಬರಿ ಸುಮಾರು ನಾಲ್ಕು ತಿಂಗಳುಗಳ ಬಳಿಕ (137 ದಿನ) ಭಾರತದಲ್ಲಿ ಮೂರು ಸರ್ಕಾರಿ ತೈಲ ಕಂಪನಿಗಳು ಪೆಟ್ರೋಲ್‌ ಹಾಗೂ ಡೀಸೆಲ್ ದರವನ್ನು ಏರಿಸಿದೆ. ಬೆಲೆ ಏರಿಕೆ ಅಗಿದ್ದೇ ತಡ ಇತ್ತ ರಾಜಕೀಯ ನಾಯಕರ ಆರೋಪ-ಪ್ರತ್ಯಾರೋಪಗಳು ಶುರುವಾಗಿವೆ.

Share this Video
  • FB
  • Linkdin
  • Whatsapp

ಬೆಂಗಳೂರು, (ಮಾ.22): ರಷ್ಯಾ ಹಾಗೂ ಉಕ್ರೇನ್‌ ಯುದ್ಧದ ನಡುವೆ ಭಾರತದಲ್ಲಿ ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯನ್ನು ಏರಿಕೆ ಮಾಡಿವೆ. ವಾಹನ ಸವಾರರಿಗೆ 2022ರ ಮೊದಲ ಶಾಕ್ ಇದಾಗಿದೆ. ಬರೋಬ್ಬರಿ ಸುಮಾರು ನಾಲ್ಕು ತಿಂಗಳುಗಳ ಬಳಿಕ (137 ದಿನ) ಭಾರತದಲ್ಲಿ ಮೂರು ಸರ್ಕಾರಿ ತೈಲ ಕಂಪನಿಗಳು ಪೆಟ್ರೋಲ್‌ ಹಾಗೂ ಡೀಸೆಲ್ ದರವನ್ನು ಏರಿಸಿದೆ.

'ಎಷ್ಟೇ ಬೆಲೆ ಏರಿಕೆ ಆದ್ರೂ ಕೊಡಲು ಜನ ಸಿದ್ಧರಿದ್ದಾರೆ, ಭಗವದ್ಗೀತೆ, ದೇಶ, ಭಾಷೆ ಧರ್ಮ ಬೇಕಾಗಿದೆ'

ಬೆಲೆ ಏರಿಕೆ ಅಗಿದ್ದೇ ತಡ ಇತ್ತ ರಾಜಕೀಯ ನಾಯಕರ ಆರೋಪ-ಪ್ರತ್ಯಾರೋಪಗಳು ಶುರುವಾಗಿವೆ. ಜನರಿಗೆ ಈಗ ಸಮಸ್ಯೆಗಳ ಬಗ್ಗೆ ಚರ್ಚೆ ಅವಶ್ಯಕತೆ ಇಲ್ಲ. ಜನ ಎಷ್ಟೇ ಬೆಲೆ ಏರಿಕೆ ಆದರೂ ಕೊಡಲು ಸಿದ್ಧರಿದ್ದಾರೆ. ಭಗವದ್ಗೀತೆ, ದೇಶ, ಭಾಷೆ ಧರ್ಮ ಬೇಕಾಗಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಇದರ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಬೆಲೆ ಏರಿಕೆ ಮೂಲಕ ಬಿಜೆಪಿ ಸರ್ಕಾರ ಪಿಕ್ ಪಾಕೆಟ್ ಎಂದು ಟಾಂಗ್ ಕೊಟ್ಟಿದ್ದಾರೆ.

Related Video