
'ಎಷ್ಟೇ ಬೆಲೆ ಏರಿಕೆ ಆದ್ರೂ ಕೊಡಲು ಜನ ಸಿದ್ಧರಿದ್ದಾರೆ, ಭಗವದ್ಗೀತೆ, ದೇಶ, ಭಾಷೆ ಧರ್ಮ ಬೇಕಾಗಿದೆ'
ಬರೋಬ್ಬರಿ ಸುಮಾರು ನಾಲ್ಕು ತಿಂಗಳುಗಳ ಬಳಿಕ (137 ದಿನ) ಭಾರತದಲ್ಲಿ ಮೂರು ಸರ್ಕಾರಿ ತೈಲ ಕಂಪನಿಗಳು ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಏರಿಸಿದೆ.ಇನ್ನು ಈ ಬಗ್ಗೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರು, (ಮಾ.22): ರಷ್ಯಾ ಹಾಗೂ ಉಕ್ರೇನ್ ಯುದ್ಧದ ನಡುವೆ ಭಾರತದಲ್ಲಿ ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಏರಿಕೆ ಮಾಡಿವೆ. ವಾಹನ ಸವಾರರಿಗೆ 2022ರ ಮೊದಲ ಶಾಕ್ ಇದಾಗಿದೆ. ಬರೋಬ್ಬರಿ ಸುಮಾರು ನಾಲ್ಕು ತಿಂಗಳುಗಳ ಬಳಿಕ (137 ದಿನ) ಭಾರತದಲ್ಲಿ ಮೂರು ಸರ್ಕಾರಿ ತೈಲ ಕಂಪನಿಗಳು ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಏರಿಸಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ವಾಹನ ಸವಾರರಿಗೆ 2022ರ ಮೊದಲ ಶಾಕ್....
ಇನ್ನು ಈ ಬಗ್ಗೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಜನರಿಗೆ ಈಗ ಸಮಸ್ಯೆಗಳ ಬಗ್ಗೆ ಚರ್ಚೆ ಅವಶ್ಯಕತೆ ಇಲ್ಲ. ಜನ ಎಷ್ಟೇ ಬೆಲೆ ಏರಿಕೆ ಆದರೂ ಕೊಡಲು ಸಿದ್ಧರಿದ್ದಾರೆ. ಭಗವದ್ಗೀತೆ, ದೇಶ, ಭಾಷೆ ಧರ್ಮ ಬೇಕಾಗಿದೆ ಎಂದಿದ್ದಾರೆ.