ಬಿಎಸ್‌ವೈ ವಿರುದ್ಧ ಒಂದಕ್ಷರ ಮಾತಾಡಿದರೂ ಸಹಿಸಲ್ಲ: ಯತ್ನಾಳ್‌ಗೆ ಅಮಿತ್ ಶಾ ವಾರ್ನಿಂಗ್

ಮಾಜಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ವಿರುದ್ಧ ಸಿಡಿದೇಳುತ್ತಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ಇದೀಗ ಕೂಲ್ ಆಗಿದ್ದಾರೆ.
 

First Published Jan 28, 2023, 10:46 AM IST | Last Updated Jan 28, 2023, 11:53 AM IST

ಬಿ.ಎಸ್.ವೈ ವಿರುದ್ಧ ಮಾತನಾಡದಂತೆ ಶಾಸಕ ಯತ್ನಾಳ್'ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ವಾರ್ನಿಂಗ್ ಮಾಡಿದ್ದಾರೆ. ಆದ್ದರಿಂದ ಇನ್ಮುಂದೆ ಬಿಎಸ್‌ವೈ ವಿರುದ್ಧ ಮಾತನಾಡಲ್ಲ ಅಂತಿದ್ದಾರೆ ಯತ್ನಾಳ್‌. ಯತ್ನಾಳ್‌ ಅವರನ್ನು ದೆಹಲಿಗೆ ಕರೆಸಿಕೊಂಡಿದ್ದ ಅಮಿತ್‌ ಶಾ, ಚುನಾವಣೆ ಮುಗಿಯುವವರೆಗೆ ಸುಮ್ಮನಿರುವಂತೆ ಎಚ್ಚರಿಕೆ ನೀಡಿದ್ದಾರೆ. ಬಿಎಸ್‌ವೈ ವಿರುದ್ಧ ಒಂದಕ್ಷರ ಮಾತಾಡಿದರೂ ಸಹಿಸುವುದಿಲ್ಲ ಎಂದಿದ್ದಾರೆ. ಯಡಿಯೂರಪ್ಪ ವಿರುದ್ಧ ಮಾತಾಡದಿದ್ದರೆ ಮಂತ್ರಿಯಾಗ್ತೀರಿ, ವಾಚಾಳಿತನದಿಂದ ಬಿಜೆಪಿಗೂ ಲಾಭವಿಲ್ಲ ನಿಮಗೂ ಲಾಭವಿಲ್ಲ ಎಂದು ಹೇಳಿದ್ದಾರೆ. ದೆಹಲಿ ನಾಯಕನ ಸಿಂಗಲ್‌ ವಾರ್ನಿಂಗ್‌ಗೆ ಯತ್ನಾಳ್‌ ಸೈಲೆಂಟ್‌ ಆಗಿದ್ದಾರೆ.

ಮತ್ತೆ ಸಿಎಂ ಕುರ್ಚಿ ಆಸೆ ಬಿಚ್ಚಿಟ್ಟ ಡಿಕೆಶಿ: ಕಾಮಧೇನು ಕಿವಿಯಲ್ಲಿ ಕೋರಿಕೆ