Asianet Suvarna News Asianet Suvarna News

ಮತ್ತೆ ಸಿಎಂ ಕುರ್ಚಿ ಆಸೆ ಬಿಚ್ಚಿಟ್ಟ ಡಿಕೆಶಿ: ಕಾಮಧೇನು ಕಿವಿಯಲ್ಲಿ ಕೋರಿಕೆ

ಮುಂದಿನ ಬಾರಿ ಸಿಎಂ ಕುರ್ಚಿಯ ಮೇಲೆ ಅನೇಕರು ಕಣ್ಣಿಟ್ಟಿದ್ದು, ಮತ್ತೆ ಈ ಕುರಿತು ಡಿಕೆಶಿ ತಮ್ಮ ಆಸೆಯನ್ನು ಹೇಳಿಕೊಂಡಿದ್ದಾರೆ.

ಕರ್ನಾಟಕ ವಿಧಾನಸಭೆ ಚುನಾವಣೆಗೆ ಮೂರು ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿದ್ದು, ಸಿಎಂ ಕುರ್ಚಿಯ ಮೇಲೆ ಅನೇಕ ನಾಯಕರು ಕಣ್ಣಿಟ್ಟಿದ್ದಾರೆ. ಮಂಡ್ಯದಲ್ಲಿ ಮತ್ತೆ ಸಿಎಂ ಕುರ್ಚಿಯ ಆಸೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ತಿಳಿಸಿದ್ದಾರೆ. ಪ್ರಜಾಧ್ವನಿ ಸಮಾವೇಶದಲ್ಲಿ ಈ ಕುರಿತು ಮಾತನಾಡಿದ್ದಾರೆ. ಡಿಕೆಶಿಗೆ ಅಭಿಮಾನಿಗಳಿಂದ ಗೂಳಿ ಗಿಫ್ಟ್‌ ಮಾಡಲಾಗಿದೆ. ಬಸವಣ್ಣನ ಉಡುಗೊರೆ ಪಡೆದು ಕಿವಿಯಲ್ಲಿ ತಮ್ಮ ಕೋರಿಕೆಯನ್ನು ಹೇಳಿಕೊಂಡಿದ್ದಾರೆ. ಕಾಮಧೇನು ಕಿವಿಯಲ್ಲಿ ಕೋರಿಕೆ ಹೇಳಿಕೊಂಡರೆ ನಿಜವಾಗುತ್ತೆ ಅನ್ನುವ ನಂಬಿಕೆ ಇದೆ. ಕಾಮಧೇನು ಕಿವಿಯಲ್ಲಿ ಮನದಾಸೆ ಹೇಳಿಕೊಂಡಿದ್ದಾಗಿ ಅವರು ಫೇಸ್‌ಬುಕ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ.