ನಾಳೆ ದೆಹಲಿಯಲ್ಲಿ ಬಿಜೆಪಿ ಹೈವೋಲ್ಟೇಜ್ ಸಭೆ: ವಿಪಕ್ಷ ನಾಯಕ, ರಾಜ್ಯಾಧ್ಯಕ್ಷ ಘೋಷಣೆ ಸಾಧ್ಯತೆ ?
ರಾಜ್ಯ ಬಿಜೆಪಿಯ 2 ಬಣಗಳಿಗೆ 2 ಪ್ರಮುಖ ಹುದ್ದೆ ನೀಡೋ ನಿರ್ಧಾರ
ಬಿ.ಎಲ್ ಸಂತೋಷ್ ತಂಡದಿಂದ ಸಿ.ಟಿ ರವಿಗೆ ರಾಜ್ಯಾಧ್ಯಕ್ಷ ಹುದ್ದೆ..?
ಬಿಎಸ್‌ವೈ ಬಣದಿಂದ ಲಿಂಗಾಯತ ನಾಯಕನಿಗೆ ವಿಪಕ್ಷ ನಾಯಕ ಸ್ಥಾನ..?
ನವದೆಹಲಿ: ನಾಳೆ ದೆಹಲಿಯಲ್ಲಿ ಬಿಜೆಪಿಯ(BJP) ಹೈವೋಲ್ಟೇಜ್ ಸಭೆ ನಡೆಯಲಿದೆ. ಇಲ್ಲಿ ಎರಡು ಪ್ರಮುಖ ವಿಷಯಗಳು ನಿರ್ಧಾರವಾಗುವ ಸಾಧ್ಯತೆ ಇದೆ. ರಾಷ್ಟ್ರೀಯ ಹುದ್ದೆಯಿಂದ ಕೆಳಗಿಳಿದ ಸಿ.ಟಿ.ರವಿ(CT Ravi) ಅಧ್ಯಕ್ಷರಾಗಬಹುದು ಎನ್ನಲಾಗ್ತಿದೆ. ಅಲ್ಲದೇ ನಾಳೆ ದೆಹಲಿಗೆ ಬರುವಂತೆ ಸಿ.ಟಿ. ರವಿಗೆ ಹೈಕಮಾಂಡ್ ಬುಲಾವ್ ನೀಡಿದೆ. ಇನ್ನೂ ಮತ್ತೊಂದೆಡೆ ಲೋಕಸಭಾ(Loksabha) ಸಮರ ಗೆಲ್ಲಲು ಬಿಜೆಪಿ ಜಾತಿಸೂತ್ರ ಹೆಣೆಯಿತಾ ಎಂಬ ಪ್ರಶ್ನೆ ಇದೀಗ ಮೂಡಿದೆ. ಲಿಂಗಾಯತರಿಗೆ ವಿಪಕ್ಷ ನಾಯಕ ಪಟ್ಟ, ಒಕ್ಕಲಿಗರಿಗೆ ರಾಜಾಧ್ಯಕ್ಷ ಪಟ್ಟ ನೀಡುವ ಸಾಧ್ಯತೆ ಇದೆ. ಹಾಗಾಗಿ ಬಿಎಸ್‌ವೈ (BSY) ಆಪ್ತ ಬೊಮ್ಮಾಯಿಗೆ ವಿಪಕ್ಷ ನಾಯಕ ಸ್ಥಾನ(Opposition leader) ಒಲಿಯಬಹುದು ಎಂದು ಹೇಳಲಾಗ್ತಿದೆ. ಸಿ.ಟಿ ರವಿ ಬಿ.ಎಲ್.ಸಂತೋಷ್ ಬಣದವರಾಗಿದ್ದಾರೆ.
ಇದನ್ನೂ ವೀಕ್ಷಿಸಿ: ಸಿಲಿಕಾನ್ ಸಿಟಿಯಲ್ಲಿ ಹನಿಟ್ರ್ಯಾಪ್ ದಂಧೆ: ಟೆಲಿಗ್ರಾಂ ಮೂಲಕ ಯುವಕರಿಗೆ ಖೆಡ್ಡಾ..!