Assembly election: ಬಿಜೆಪಿಗೆ ರಸ್ತೆ ಸರಿ ಮಾಡೋ ಯೋಗ್ಯತೆ ಇಲ್ಲ: ಕಟೀಲ್‌ಗೆ ಯು.ಟಿ. ಖಾದರ್ ತಿರುಗೇಟು

ಸಂಸದ ನಳಿನ್‌ ಕುಮಾರ್‌ ಕಟೀಲ್ ಸೇರಿ ಬಿಜೆಪಿ ನಾಯಕರಿಗೆ ರಸ್ತೆ, ಗುಂಡಿ ಸರಿ ಮಾಡುವ ಅರ್ಹತೆ ಮತ್ತು ಯೋಗ್ಯತೆ ಇವರಿಗೆ ಇಲ್ಲ. ಹೀಗಾಗಿ, ಲವ್‌ ಜಿಹಾದ್ ಎಂಬ ಭಾವನಾತ್ಮಕ ವಿಚಾರ ಮುನ್ನೆಲೆಗೆ ತಂದಿದ್ದಾರೆ.

First Published Jan 4, 2023, 4:18 PM IST | Last Updated Jan 4, 2023, 4:18 PM IST

ಮಂಗಳೂರು (ಜ.04): ಸಂಸದ ನಳಿನ್‌ ಕುಮಾರ್‌ ಕಟೀಲ್ ಸೇರಿ ಬಿಜೆಪಿ ನಾಯಕರಿಗೆ ರಸ್ತೆ, ಗುಂಡಿ ಸರಿ ಮಾಡುವ ಅರ್ಹತೆ ಮತ್ತು ಯೋಗ್ಯತೆ ಇವರಿಗೆ ಇಲ್ಲ. ಹೀಗಾಗಿ, ಲವ್‌ ಜಿಹಾದ್ ಎಂಬ ಭಾವನಾತ್ಮಕ ವಿಚಾರ ಮುನ್ನೆಲೆಗೆ ತಂದಿದ್ದಾರೆ. ಅಧಿಕಾರಕ್ಕೆ ಬಂದ ಮೇಲೆ ಏನೆಲ್ಲಾ ‌ಮಾಡ್ತೇನೆ ಹೇಳಿದ್ರೋ ಅದು ಆಗಿಲ್ಲ. ದಕ್ಷಿಣ ಕನ್ನಡ ಜಿಲ್ಲೆಗೆ ಕುಚಲಕ್ಕಿ ತರಲು ಯೋಗ್ಯತೆ ಇಲ್ಲದ ಇವರು ಜನಪ್ರತಿನಿಧಿಗಳಾ? ಎಂದು ವಿಪಕ್ಷ ಉಪನಾಯಕ ಯು.ಟಿ. ಖಾದರ್ ಕಿಡಿ ಕಾರಿದ್ದಾರೆ. 

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಯು.ಟಿ. ಖಾದರ್, ಉಳ್ಳಾಲದಲ್ಲಿ ರಸ್ತೆ, ಚರಂಡಿ ವಿಷಯ ಬಿಟ್ಟು ಲವ್ ಜಿಹಾದ್ ಕಡೆ ಗಮನ ಕೊಡಿ ಎಂಬ ನಳಿನ್ ಕುಮಾರ್ ಹೇಳಿಕೆಗೆ ನಾಚಿಕೆ ಆಗಬೇಕು. ಇವರಿಗೆ ಅಭಿವೃದ್ಧಿ ಮಾಡುವ ಯೋಗ್ಯತೆ ಇಲ್ಲ ಅಂತ ಜನರಿಗೆ ಹೇಳಿದ್ದಾರೆ. ಜನರನ್ನ ದಿಕ್ಕು ತಪ್ಪಿಸುವ ಕೆಲಸ ಮಾಡ್ತಿದಾರೆ. ಡಬಲ್ ಇಂಜಿನ್ ಸರ್ಕಾರದ ಫ್ಯೂಲ್ ಕಮ್ಯೂನಲ್ ಫ್ಯೂಲ್ ಆಗಿದೆ. ಅವರ ಸೈಲೆನ್ಸರ್ ಹೊಗೆ ವಿಷ, ಅದು ಯಾರನ್ನೂ ‌ಬದುಕಿಸಲ್ಲ. ಅವರ ಇಂಜಿನ್ ಜನ ಸಾಮಾನ್ಯರ ಕಣ್ಣೀರಿನಲ್ಲಿ ಕಟ್ಟಲಾಗಿದೆ. ಇನ್ನು ಮುಂದೆ ಇವರ ಇಂಜಿನ್ ಅನ್ನು ಜನ ಕಿತ್ತು ಬಿಸಾಡ್ತಾರೆ. ಇವರು ಜಾತಿ ಧರ್ಮ ಆಧಾರದಲ್ಲಿ ವಿಭಾಗ ಮಾಡುವವರು. ಬಿರುಕು ಮೂಡಿಸಲು ಇವರು ಇದನ್ನೆಲ್ಲಾ ಮಾಡ್ತಾ ಇದಾರೆ. ನಿನ್ನೆ ನಳಿನ್ ಕುಮಾರ್ ಕಟೀಲ್ ಸಿಕ್ಕಿದಾಗ ಚಾಲೆಂಜ್ ಹಾಕಿದ್ದೇನೆ. ರಮಾನಾಥ್ ರೈ ಗೆದ್ದು ಉಸ್ತುವಾರಿ ಸಚಿವರಾಗ್ತಾರೆ, ನಮ್ಮದೇ ಸರ್ಕಾರ ಬರುತ್ತೆ ಅಂತ ಹೇಳಿದ್ದೇನೆ ಎಂದು ಹೇಳಿದರು. 

ರಸ್ತೆ & ಚರಂಡಿ ವಿಚಾರ ಬಿಟ್ಹಾಕಿ, ಲವ್ ಜಿಹಾದ್ ಬಗ್ಗೆ ಯೋಚಿಸಿ: ನಳಿನ್ ಕುಮಾರ್ ಕಟೀಲ್

Video Top Stories