ರಾಜ್ಯದ 25 ಸ್ಥಾನಗಳಿಗೆ ಟಿಕೆಟ್‌ ಘೋಷಣೆ: ಅಳೆದು ತೂಗಿ ಎಲ್ಲಾ ಜಾತಿಗಳಿಗೂ ಟಿಕೆಟ್‌ ಹಂಚಿದ ಬಿಜೆಪಿ !

ರಾಜ್ಯದ 25 ಸ್ಥಾನಗಳಿಗೆ ಟಿಕೆಟ್ ಘೋಷಿಸಿದ ಬಿಜೆಪಿ
ಚುನಾವಣಾ ಪ್ರಚಾರದತ್ತ ಗಮನ ಹರಿಸಿದ ಬಿಜೆಪಿ
ಅಳೆದು ತೂಗಿ ಎಲ್ಲಾ ಜಾರಿಗಳಿಗೂ ಟಿಕೆಟ್ ಹಂಚಿಕೆ

First Published Mar 28, 2024, 11:02 AM IST | Last Updated Mar 28, 2024, 11:02 AM IST

ರಾಜ್ಯದ 25 ಸ್ಥಾನಗಳಿಗೆ ಬಿಜೆಪಿ ಟಿಕೆಟ್(Ticket) ಘೋಷಣೆ ಮಾಡಿದೆ. ಮೈತ್ರಿಯಲ್ಲಿ ತಮ್ಮ ಪಾಲಿನ ಎಲ್ಲಾ ಕ್ಷೇತ್ರಗಳ ಅಭ್ಯರ್ಥಿ ಘೋಷಣೆ ಮಾಡಲಾಗಿದೆ. ಹೀಗಾಗಿ ಈಗ ಚುನಾವಣಾ ಪ್ರಚಾರದತ್ತ ಬಿಜೆಪಿ(BJP) ಗಮನ ಹರಿಸಿದೆ. ಲೋಕಸಭೆ(Loksabha) ಅಖಾಡದಲ್ಲಿ ಜಾತಿ ಲೆಕ್ಕಾಚಾರ ಜೋರಾಗಿದ್ದು, ಅಳೆದು ತೂಗಿ ಎಲ್ಲಾ ಜಾತಿಗಳಿಗೂ ಬಿಜೆಪಿ ಟಿಕೆಟ್ ಹಂಚಿಕೆ ಮಾಡಿದೆ. ಈ ಮೂಲಕ ಎಲ್ಲರನ್ನೂ ವಿಶ್ವಾಸಕ್ಕೆ ಪಡೆಯುವ ಯತ್ನವನ್ನು ಬಿಜೆಪಿ ಹೈಕಮಾಂಡ್ ಮಾಡಿದೆ. ರಾಜ್ಯದಲ್ಲಿ ಲಿಂಗಾಯತ ಸಮುದಾಯದ 9 ಜನರಿಗೆ ಬಿಜೆಪಿ ಟಿಕೆಟ್‌ ನೀಡಿದ್ರೆ, ಒಕ್ಕಲಿಗ - 3, ದಲಿತ - 5, ಎಸ್‌ಟಿ - 2, ಒಬಿಸಿ - 3, ಬ್ರಾಹ್ಮಣ ಸಮುದಾಯದ 3 ಜನರಿಗೆ ಟಿಕೆಟ್‌ ನೀಡಲಾಗಿದೆ.

ಇದನ್ನೂ ವೀಕ್ಷಿಸಿ:  Lok Sabha election 2024: ಚಿತ್ರದುರ್ಗದಲ್ಲಿ ಕಾರಜೋಳಗೆ ಟಿಕೆಟ್ ಕೊಟ್ಟಿದ್ದೇಕೆ..? ಇವರನ್ನು ಕಣಕ್ಕಿಳಿಸಲು ಕಾರಣವೇನು ?