ಸವದಿಗೆ ಅಥಣಿ ಟಿಕೆಟ್ ಮಿಸ್, ಬಿಕ್ಕಿ ಬಿಕ್ಕಿ ಅತ್ತ ಮಾಜಿ ಡಿಸಿಎಂ
ವಿಧಾನಸಭಾ ಕ್ಷೇತ್ರಗಳಿಗೆ ಕಮಲ ಪಾಳಯವು ಯಾರನ್ನು ಕಣಕ್ಕಿಳಿಸಲಿದೆ ಎಂಬ ಕುತೂಹಲಕ್ಕೆ ತೆರೆಬಿದ್ದಿದ್ದು, ಮೊದಲ ಪಟ್ಟಿ ಬಿಡುಗಡೆ ಮಾಡಿದೆ.
ವಿಧಾನಸಭಾ ಕ್ಷೇತ್ರಗಳಿಗೆ ಕಮಲ ಪಾಳಯವು ಯಾರನ್ನು ಕಣಕ್ಕಿಳಿಸಲಿದೆ ಎಂಬ ಕುತೂಹಲಕ್ಕೆ ತೆರೆಬಿದ್ದಿದ್ದು, ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ತೀವ್ರ ಕುತೂಹಲ ಮೂಡಿಸಿದ್ದ ಅಥಣಿ ಕ್ಷೇತ್ರದ ಟಿಕೆಟ್ ವಲಸಿಗ ಮಹೇಶ್ ಕುಮಟಳ್ಳಿಗೆ ನೀಡಲಾಗಿದ್ದು , ಹೈಕಮಾಂಡ್ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿಗೆ ಶಾಕ್ ನೀಡಿದೆ. ಇನ್ನು ಮಹೇಶ್ ಕಮಟಳ್ಳಿ ಹೆಸರನ್ನು ಕೈ ಬಿಡಲಾಗುತ್ತೆ ಎನ್ನಲಾಗುತ್ತಿತ್ತು, ಆದರೆ ರಮೇಶ್ ಜಾರಕಿಹೊಳಿ ಕುಮಟಳ್ಳಿಗೆ ಟಿಕೆಟ್ ಕೊಡುವಂತೆ ಒತ್ತಾಯಿಸಿದ್ದುರ.ಇನ್ನು ಕುಮಟಳ್ಳಿಗೆಟಿಕೆಟ್ ಖಚಿತವಾಗುತ್ತಿದ್ದಂತೆ ಮಾಜಿ ಡಿಸಿಎಂ ಬೆಂಬಲಿಗರ ಸಭೆಯಲ್ಲಿ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಬಣಜಿಗ ಬೆಂಬಲಿಗರ ಸಮಾವೇಶದಲ್ಲಿ ಸವದಿ ಭಾವುಕರಾಗಿದ್ದಾರೆ.