Party Rounds: ಜು.18ರ ಎನ್‌ಡಿಎ ಸಭೆಯಲ್ಲಿ ಭಾಗಿಯಾಗ್ತಾರಾ ಕುಮಾರಸ್ವಾಮಿ?

ಬಿಜೆಪಿ ಹಾಗೂ ಜೆಡಿಎಸ್‌ ನಡುವೆ ಮೈತ್ರಿ ನಡೆಯೋದು ಬಹುತೇಕ ಫಿಕ್ಸ್‌ ಆಗಿದೆ. ಸ್ವತಃ ಕುಮಾರಸ್ವಾಮಿ ಕೂಡ ಮೈತ್ರಿ ಆಗಲಿ ಎನ್ನುವುದು ಜನರ ಭಾವನೆ ಎಂದು ಹೇಳಿದ್ದಾರೆ. ಇದರ ನಡುವೆ ಜು.18ರ ಎನ್‌ಡಿಎ ಸಭೆಯಲ್ಲಿ ಎಚ್‌ಡಿ ಕುಮಾರಸ್ವಾಮಿ ಭಾಗಿಯಾಗ್ತಾರಾ ಎನ್ನುವ ಕುತೂಹಲ ಕೂಡ ಉಳಿದುಕೊಂಡಿದೆ.

Share this Video
  • FB
  • Linkdin
  • Whatsapp

ಬೆಂಗಳೂರು (ಜು.15): ಮುಂದಿನ ಲೋಕಸಭೆ ಚುನಾವಣೆಗೆ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ ಬಹುತೇಕ ಪಕ್ಕಾ ಆಗಿದೆ. ಏಷ್ಯಾನೆಟ್‌ ಸುವರ್ಣನ್ಯೂಸ್‌ಗೆ ನೀಡಿದ ಎಕ್ಸ್‌ಕ್ಲೂಸಿವ್‌ ಸಂದರ್ಶನದಲ್ಲೂ ಕುಮಾರಸ್ವಾಮಿ ಮೈತ್ರಿ ಸಾಧ್ಯತೆ ಇದೆ ಎಂದಿದ್ದು, ಈವರೆಗೂ ಯಾವುದೇ ಮಾತುಕತೆಗಳು ಆಗಿಲ್ಲ ಎಂದಿದ್ದಾರೆ.

ಲೋಕಸಭೆ ಚುನಾವಣೆಗೆ ಮೈತ್ರಿ ಹೊಂದಾಣಿಕೆ ಆದಲ್ಲಿ ಎಷ್ಟು ಕ್ಷೇತ್ರ ಜೆಡಿಎಸ್‌ಗೆ ಹಾಗೂ ಎಷ್ಟು ಕ್ಷೇತ್ರ ಬಿಜೆಪಿಗೆ ಅನ್ನೋದರ ಬಗ್ಗೆ ಚರ್ಚೆಗಳು ಆಗಬೇಕಿದೆ. ಇನ್ನೊಂದೆಡೆ ಕಾಂಗ್ರೆಸ್‌ ಮುಂದಿನ ಲೋಕಸಭೆ ಚುನಾವಣೆಯಲ್ಲಿ 20 ಕ್ಷೇತ್ರಗಳಲ್ಲಿ ಗೆಲ್ಲುವ ಗುರಿ ಇರಿಸಿಕೊಂಡಿದೆ.

ವಿಧಾನಪರಿಷತ್‌ನಲ್ಲಿ ಅಬ್ಬರಿಸುತ್ತಿದ್ದ ಕಾಂಗ್ರೆಸ್‌ ಕಟ್ಟಾಳು ಈಗ ಸೈಲೆಂಟ್‌!

ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ ಆಗಬೇಕು ಅನ್ನೋದು ಜನರ ಭಾವನೆ. ಆದರೆ, ಈ ಭಾವನೆಗಳಿಗೆ ನಾವು ಹೇಗೆ ಸ್ಪಂದನೆ ಮಾಡಬೇಕು ಅನ್ನೋದನ್ನ ಪಕ್ಷ ತೀರ್ಮಾನ ಮಾಡಲಿದೆ. ಯಾವುದೇ ಬಿಜೆಪಿ ನಾಯಕರನ್ನು ಭೇಟಿ ಮಾಡಿಲ್ಲ. ಭೇಟಿ ಮಾಡೋದಾದರೆ ಜನರಿಗೆ ತಿಳಿಸಿಯೇ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

Related Video