
ಮೋದಿ ಮೋಡಿ, ನಿತೀಶ್ ಬಲ.. NDAಗೆ ವರ! ಚಿರಾಗ್ ಸೃಷ್ಟಿಸಿದ ಮಗಧ ಸಂಚಲನ?
ಬಿಹಾರದಲ್ಲಿ ಕೇಸರಿ ಪಡೆ ಅದ್ವಿತೀಯ ದಿಗ್ವಿಜಯ ದಾಖಲಿಸಿದೆ.. ಮಹಾಘಟಬಂಧನ ಮಾತ್ರ ಮಖಾಡೆ ಮಲಗಿಬಿಟ್ಟಿದೆ.. ನಿತೀಶ್ ಹಾಗೂ ಮೋದಿ ಪಡೆಯ ಅಸಲಿ ಮ್ಯಾಜಿಕ್ ಟ್ರಿಕ್ ಏನು? ರಾಹುಲ್ ಗಾಂಧಿ ಶತಪ್ರಯತ್ನ ಮಾಡಿದ ಮೇಲೂ, ಅಟ್ ಲೀಸ್ಟ್ ಡಬಲ್ ಡಿಜಿಟ್ ದಾಟೋಕೂ ಸಾಧ್ಯವಾಗ್ಲಿಲ್ವಲ್ಲಾ ಯಾಕೆ? ಉತ್ತರ ಇಲ್ಲಿದೆ ನೋಡಿ..
ಬಿಹಾರ ವಿಧಾನಸಭೆ ಚುನಾವಣೆನಾ ಬರೀ ಒಂದು ರಾಜ್ಯದ ಚುನಾವಣೆಯಾಗಿ ನೋಡೋಕೆ ಸಾಧ್ಯವೇ ಇಲ್ಲ.. ಯಾಕಂದ್ರೆ, ಈ ಬಾರಿ ಬಿಹಾರದ ಚುನಾವಣೆ ಬರೀ ಸ್ಥಳೀಯ ರಾಜಕೀಯದ ದಿಕ್ಸೂಚಿ ಮಾತ್ರವೇ ಆಗಿರಲಿಲ್ಲ, ಬದಲಿಗೆ ದೇಶದ ರಾಜಕೀಯದ ಮುಂದಿನ ಚಲನವಲನಗಳಿಗೆ ಒಂದು ಟ್ರೈಲರ್‌ಅಂತಲೇ ಸದ್ದು ಮಾಡಿತ್ತು.. ಹೀಗಾಗಿ, ಈ ಕಾದಾಟದ ಮೇಲೆ ಇಡೀ ದೇಶದ ರಾಜಕೀಯ ಪಂಡಿತರು, ಸಾಮಾನ್ಯ ಜನರೂ ಕಣ್ಣಿಟ್ಟಿದ್ದರು.