Ground Report: ಚಿಕ್ಕೋಡಿಯಲ್ಲಿ ಬಿಜೆಪಿ, ಕಾಂಗ್ರೆಸ್‌ ಆಕಾಂಕ್ಷಿಗಳ ನಡುವೆ ಭರ್ಜರಿ ಟಿಕೆಟ್‌ ಫೈಟ್‌

ಬೆಳಗಾವಿಯಲ್ಲಿ ಹೊಂದಾಣಿಕೆ ಮತ್ತು ಒಳ ಒಪ್ಪಂದದ ರಾಜಕಾರಣ ಮಾಮೂಲಿಯಾಗಿದೆ. ಇಲ್ಲಿ ಪಕ್ಷಗಳಿಗಿಂತ ವೈಯಕ್ತಿಕ ವರ್ಚಿಸ್ಸಿನ ಮೇಲೆಯೇ ರಾಜಕಾರಣ ನಿಂದಿದೆ. ಇಲ್ಲಿ ಜೆಡಿಎಸ್‌ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಿದೆ.

First Published Dec 22, 2022, 6:30 PM IST | Last Updated Dec 22, 2022, 6:30 PM IST


ಬೆಳಗಾವಿ (ಡಿ.22): ಬೆಳಗಾವಿಯಲ್ಲಿ ಹೊಂದಾಣಿಕೆ ಮತ್ತು ಒಳ ಒಪ್ಪಂದದ ರಾಜಕಾರಣ ಮಾಮೂಲಿಯಾಗಿದೆ. ಇಲ್ಲಿ ಪಕ್ಷಗಳಿಗಿಂತ ವೈಯಕ್ತಿಕ ವರ್ಚಿಸ್ಸಿನ ಮೇಲೆಯೇ ರಾಜಕಾರಣ ನಿಂದಿದೆ. ಇಲ್ಲಿ ಜೆಡಿಎಸ್‌ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಿದೆ.

ಚಿಕ್ಕೋಡಿಯಲ್ಲಿ ಚುನಾವಣಾ ಅಖಾಡ ರಂಗೇರಿದೆ. ಖಾನಾಪುರದಲ್ಲಿ ಟಿಕೆಟ್‌ಗೆ ಭಾರೀ ಡಿಮ್ಯಾಂಡ್‌ ಕ್ರಿಯೇಟ್‌ ಆಗಿದೆ. ಚಿಕ್ಕೋಡಿ- ಸದಲಗಾದಲ್ಲಿ ಅಮಿತ್‌ ಕೋರೆಗೆ ಬಿಜೆಪಿ ಟಿಕೆಟ್‌ ಫೈನಲ್‌ ಸಾಧ್ಯತೆಯಿದೆ. ಅಥಣಿ ಕ್ಷೇತ್ರದಲ್ಲಿ ಕುಮಟಳ್ಳಿಗೆ ಠಕ್ಕರ್‌ ಕೊಡಲು ಸತೀಶ್‌ ಜಾರಕಿಹೊಳಿ ಪ್ಲಾನ್‌ ಮಾಡಿಕೊಂಡಿದ್ದಾರೆ. ಹುಕ್ಕೇರಿಯಲ್ಲಿ ಮಾಜಿ ಸಚಿವ ದಿ.ಉಮೇಶ್‌ ಕತ್ತಿ ಅವರ ಸಹೋದರನಿಗೆ ಬಿಜೆಪಿ ಟಿಕೆಟ್‌ ಸಿಗುತ್ತದೆಯೇ? ಇಲ್ಲವೋ ಎಂಬ ಅನುಮಾನ ಕಾಡುತ್ತಿದೆ. ರಾಯಭಾಗದಲ್ಲಿ ಧುರ್ಯೋಧನನ ವಿರುದ್ಧ ಮಹಾವೀರ ಕಸರತ್ತು ನಡೆಸಲಿದ್ದಾರೆ. ಕುಡಚಿಯಲ್ಲಿ ಕಾಂಗ್ರೆಸ್‌ ಟಿಕೆಟ್‌ಗಾಗಿ ತಂದೆ ಮಗನ ನಡುವೆಯೇ ಫೈಟ್‌ ಆರಂಭವಾಗಿದೆ. ಕಾಗವಾಡದಲ್ಲಿ ಶ್ರೀಮಂತ ಪಾಟೀಲ್‌ಗೆ ಬಿಜೆಪಿ ಟಿಕೆಟ್‌ ಸಿಗುವುದೇ ಅನುಮಾನವಾಗಿದೆ. 

Video Top Stories