'ದಿಕ್ಕು ದೆಸೆ ಇಲ್ಲದಂಗಾಗಿದೆ ಕಾಂಗ್ರೆಸ್; ಇನ್ನೊಂದೆರಡು ವರ್ಷಗಳಲ್ಲಿ ದೇಶದಿಂದಲೇ ಔಟ್.'!
ಕಾಂಗ್ರೆಸ್ ಅಸ್ತಿತ್ವ ಕಳೆದುಕೊಂಡು ದಿಕ್ಕು ದೆಸೆ ಇಲ್ಲದಂಗಾಗಿದೆ. ಅಸ್ತಿತ್ವ ಉಳಿಸಿಕೊಳ್ಳಲು ರೈತ ಹೋರಾಟದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೊಂದೆರಡು ವರ್ಷಗಳಲ್ಲಿ ದೇಶದಿಂದಲೇ ಕಾಂಗ್ರೆಸ್ ಇಲ್ಲದಂತಾಗುತ್ತದೆ' ಎಂದು ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು (ಡಿ. 08): 'ಕಾಂಗ್ರೆಸ್ ಅಸ್ತಿತ್ವ ಕಳೆದುಕೊಂಡು ದಿಕ್ಕು ದೆಸೆ ಇಲ್ಲದಂಗಾಗಿದೆ. ಅಸ್ತಿತ್ವ ಉಳಿಸಿಕೊಳ್ಳಲು ರೈತ ಹೋರಾಟದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೊಂದೆರಡು ವರ್ಷಗಳಲ್ಲಿ ದೇಶದಿಂದಲೇ ಕಾಂಗ್ರೆಸ್ ಇಲ್ಲದಂತಾಗುತ್ತದೆ. ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಹಿಂದೆ ಅವರ ಸರ್ಕಾರ ಇದ್ದಾಗ ಈ ಮಸೂದೆ ಬರಬೇಕೆಂದು ಹೋರಾಟ ಮಾಡುತ್ತಿದ್ದರು. ಈಗ ವಿರೋಧಿಸುತ್ತಿದ್ದಾರೆ. ಅವರಲ್ಲೇ ದ್ವಂದ್ವ ನೀತಿ ಇದೆ' ಎಂದು ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
'ನಾವು ಜೀವಂತವಾಗಿದ್ದೇವೆ ಎಂದು ತೋರಿಸಿಕೊಳ್ಳಲು ಕಾಂಗ್ರೆಸ್ ಬಂದ್‌ಗೆ ಬೆಂಬಲ ನೀಡಿದೆ'