ಬಿಜೆಪಿಯ ವೀರ ಸಾವರ್ಕರ್ ಅಸ್ತ್ರ ಬದಿಗೆ ಸರಿಸಿದ ಸಿದ್ದು, ಕೆರಳಿ ಕೆಂಡವಾದ ಡಿಕೆಶಿ!

ಡಿಕೆಶಿ ಶಿಕ್ಷಣ ಸಂಸ್ಥೆಗಳ ಮೇಲೆ ಸಿಬಿಐ ದಾಳಿ, ಮತ್ತೆ ಸಂಕಷ್ಟ ಶುರು, 93 ಕ್ಷೇತ್ರಕ್ಕೆ ಸಂಭಾವ್ಯ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡಿದ ಜೆಡಿಎಸ್, ಅಧಿವೇಶನದಲ್ಲಿ ಸಾವರ್ಕರ್ ಭಾವಚಿತ್ರ, ಕಾಂಗ್ರೆಸ್ ಪ್ರತಿಭಟನೆ ಸೇರಿಂತೆ ಇಂದಿನ ಇಡೀ ದಿನದ ಸುದ್ದಿ ಹೈಲೈಟ್ಸ್ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ. 

First Published Dec 19, 2022, 10:49 PM IST | Last Updated Dec 19, 2022, 10:49 PM IST

ಬೆಳಗಾವಿ ಅಧಿವೇಶನದ ಮೊದಲ ದಿನ ಭಾರಿ ಕಾಂಗ್ರೆಸ್ ನಡೆ ಅಚ್ಚರಿ ಸ್ವತಃ ಬಿಜೆಪಿಗೆ ಅಚ್ಚರಿ ತರಿಸಿದೆ.  ಸದನದಲ್ಲಿ ವೀರ ಸಾವರ್ಕರ್ ಭಾವಚಿತ್ರ ಅನಾವರಣ ಮಾಡಿರುವ ಬಿಜೆಪಿ, ಪ್ರತಿಪಕ್ಷ ಕಾಂಗ್ರೆಸ್‌ನಿಂದ ತೀವ್ರ ಪ್ರತಿಭಟನೆ ನಿರೀಕ್ಷಿಸಿತ್ತು. ಆದರೆ ಸಿದ್ದರಾಮಯ್ಯ ವೀರ ಸಾವರ್ಕರ್ ಫೋಟೋಗೆ ನಮ್ಮ ತಕರಾರಿಲ್ಲ. ಇದ ಸಮಾಜ ಸುಧಾಕರು, ದಾರ್ಶನಿಕರ ಫೋಟೋ ಹಾಕಬೇಕಿತ್ತು. ಇದು ನಮ್ಮ ಬೇಡಿಕೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಈ ಮೂಲಕ ಬಿಜೆಪಿ ಸಾವರ್ಕರ್ ಫೋಟೋ ಅಸ್ತ್ರದಿಂದ ಸಿದ್ದರಾಮಯ್ಯ ಜಾರಿಕೊಂಡಿದ್ದಾರೆ. ಆದರೆ ಡಿಕೆ ಶಿವಕುಮಾರ್ ಮಾತ್ರ ಸಾವರ್ಕರ್ ಫೋಟೋ ಯಾಕೆ ಎಂದು ಪ್ರಶ್ನಿಸಿದ್ದಾರೆ. ಇತ್ತ ಡಿಕೆಶಿ ಬೆಂಬಲಿಗರು ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರನಲ್ಲ ಎಂದು ವಿವಾದ ಕೆಣಕಿದ್ದಾರೆ.
 

Video Top Stories