News Hour: ಕಾಂಗ್ರೆಸ್‌ನಲ್ಲಿ ಶುರುವಾಯ್ತು ಮತ್ತೆ ಬೆಳಗಾವಿ ಬೆಂಕಿ, ಜಾರಕಿಹೊಳಿ ಪವರ್‌ಗೆ ಡಿಕೆ ಡಿಚ್ಚಿ!
ಕಾಂಗ್ರೆಸ್ ಸರ್ಕಾರದಲ್ಲಿ ಬೆಳಗಾವಿ ಬೆಂಕಿ ಮತ್ತೆ ಭುಗಿಲೆದ್ದಿದೆ. ಡಿಸಿಎಂ ಡಿಕೆಶಿ ಬೆಳಗಾವಿ ಹಸ್ತಕ್ಷೇಪಕ್ಕೆ ಸತೀಶ್ ಸಿಡಿದೆದ್ದಿದ್ದಾರೆ. ಆಪ್ತನಿಗೆ ಮಂಡಳಿ ಸದಸ್ಯ ಸಿಗಲಿಲ್ಲ ಅಂತಾ ಜಾರಕಿಹೊಳಿ ಹೈಕಮಾಂಡ್‌ಗೆ ದೂರು ನೀಡಿದ್ದರೆ, ಮುಸುಕಿನ ಗುದ್ದಾಟ ತಾರಕಕ್ಕೇರಿದೆ.
ಬೆಂಗಳೂರು (ಅ.18): ರಾಷ್ಟ್ರ ರಾಜಕಾರಣದಲ್ಲಿ ಸದ್ದು ಮಾಡಿದ್ದ ಬೆಳಗಾವಿ ರಾಜಕಾರಣ ಈಗ ಮತ್ತೆ ಮುನ್ನಲೆಗೆ ಬಂದಿದೆ. ಎಚ್‌ಡಿಕೆ ಮೈತ್ರಿ ಸರ್ಕಾರವನ್ನೇ ಕೆಡವಿದ್ದ ಬೆಳಗಾವಿ ಪಾಲಿಟಿಕ್ಸ್ ಈಗ ಕಾಂಗ್ರೆಸ್ ಸರ್ಕಾರದಲ್ಲಿ ಮತ್ತೆ ಸದ್ದು ಮಾಡ್ತಿದೆ.
ಅಂದು ರಮೇಶ್ ಜಾರಕಿಹೊಳಿ ಬೆಳಗಾವಿ ಡಿಸಿಸಿ ಬ್ಯಾಂಕ್ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಿದ್ದರು ಅಂತಾ ಇದೇ ಡಿಕೆಶಿ ವಿರುದ್ಧ ಸಿಡಿದೆದ್ದು 17 ಮಂದಿಯನ್ನ ಆಪರೇಷನ್ ಮಾಡಿದ್ದರು. ಇಡೀ ದೋಸ್ತಿ ಸರ್ಕಾರವನ್ನೇ ಬೀಳಿಸಿ ಬಿಜೆಪಿ ಅಧಿಕಾರಕ್ಕೆ ಬರುವಂತೆ ಮಾಡಿದ್ದರು. ಆದ್ರೆ ಈಗ ಸ್ವತಃ ತಮ್ಮ ಸತೀಶ್ ಜಾರಕಿಹೊಳಿ ಸಿಡಿದೆದ್ದಿದ್ದಾರೆ. ಬೆಳಗಾವಿಯ ರಾಜಕೀಯಕ್ಕೆ ಡಿಕೆ ಎಂಟ್ರಿ ಕೊಟ್ಟಿದ್ದಕ್ಕೆ ಮುಸುಕಿನ ಗುದ್ದಾಟ ಶುರುವಾಗಿದೆ.
ಬೆಳಗಾವಿಯಲ್ಲಿ ಡಿ.ಕೆ. ಶಿವಕುಮಾರ್‌ಗೆ ಭಾರಿ ಮುಜುಗರ: ಸತೀಶ್ ಜಾರಕಿಹೊಳಿ ದಸರಾ ಟೀಮ್‌ನಿಂದ ತಿರುಗೇಟು!
ಇನ್ನು ತನ್ನ ಆಪ್ತನಿಗೆ ಹುದ್ದೆ ಸಿಗಲಿಲ್ಲ ಅಂತಾ ತಮ್ಮ ಸತೀಶ್ ಜಾರಕಿಹೊಳಿ ಸಿಡಿದೆದ್ದಿದ್ದಾರೆ. ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯತ್ವಕ್ಕೆ ಸತೀಶ್ ಆಪ್ತ ಪ್ರದೀಪ್ ನೇಮಕಕ್ಕೆ ಪಟ್ಟು ಹಿಡಿದಿದ್ರು.. ಇದಕ್ಕೆ ಸಿಎಂ ಕೂಡ ಒಪ್ಪಿಗೆ ನೀಡಿದ್ದರು. ಆದರೆ, ಇದಕ್ಕೆ ಡಿ.ಕೆ ಶಿವಕುಮಾರ್ ಕೊಕ್ಕೆ ಹಾಕಿದ್ದಾರಂತೆ. ಸತೀಶ್ ಆಪ್ತನ ಬದಲು ಬೆಂಗಳೂರಿನ ಡಾ.ಸಿ. ಪ್ರದೀಪ್‌ಗೆ ಸದಸ್ಯತ್ವ ಕೊಡಿಸಿದ್ದಾರೆ. ಈ ನೇಮಕವೇ ಇಬ್ಬರ ನಾಯಕರ ಮಧ್ಯೆ ಸಮರಕ್ಕೆ ಕಾರವಾಗಿದೆ. ಇತ್ತ ಸಚಿವೆ ಲಕ್ಷ್ಮೀಹೆಬ್ಬಾಳ್ಕರ್ ಹಸ್ತಕ್ಷೇಪಕ್ಕೂ ಸತೀಶ್ ಕೆಂಡಕಾರ್ತಿದ್ದಾರೆ.