ಎಚ್‌ಡಿಕೆಗೆ ಪೊಲೀಸರ ಮೇಲೆ ಡೌಟು; ಎಚ್‌ಡಿಕೆ ಸಿಎಂ ಆಗಿದ್ರಾ ಎಂದು ಗೃಹಮಂತ್ರಿಗೆ ಡೌಟು!

ಮಂಗಳೂರು ಏರ್ಪೋರ್ಟ್‌ನಲ್ಲಿ ಬಾಂಬ್ ಪತ್ತೆ ಪ್ರಕರಣ; ಪೊಲೀಸರ ಮೇಲೆ ಅನುಮಾನ ವ್ಯಕ್ತಪಡಿಸಿದ್ದ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ; ಎಚ್‌ಡಿಕೆ ವಿರುದ್ಧ ಗೃಹಮಂತ್ರಿ ಬಸವರಾಜ್ ಬೊಮ್ಮಾಯಿ ಗರಂ

Share this Video
  • FB
  • Linkdin
  • Whatsapp

ಬೆಂಗಳೂರು (ಜ.22): ಮಂಗಳೂರು ಏರ್ಪೋರ್ಟ್‌ನಲ್ಲಿ ಬಾಂಬ್ ಪತ್ತೆ ಪ್ರಕರಣ ಈಗ ರಾಜಕೀಯ ಕೆಸರೆರಚಾಟ ಶುರುವಾಗಿದೆ. ಮಂಗಳವಾರ ಪೊಲೀಸರ ಮೇಲೆ ಅನುಮಾನ ವ್ಯಕ್ತಪಡಿಸಿದ್ದ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ, ಅದೊಂದು ಅಣಕು ಪ್ರದರ್ಶನವೆಂದು ಹೇಳಿದ್ದರು.

ಇದನ್ನೂ ಓದಿ | ಮಂಗಳೂರು ಬಾಂಬರ್ ಆದಿತ್ಯ ರಾವ್ ಪೊಲೀಸರ ಮುಂದೆ ಶರಣು

ಈಗ ಎಚ್‌ಡಿಕೆ ಹೇಳಿಕೆಗೆ ಗೃಹಮಂತ್ರಿ ಬಸವರಾಜ್ ಬೊಮ್ಮಾಯಿ ಗರಂ ಆಗಿದ್ದು, ಎಚ್‌ಡಿಕೆ ಈ ಹಿಂದೆ ಸಿಎಂ ಆಗಿದ್ದರೇ ಎಂಬ ಸಂಶಯ ಹುಟ್ಟಿಕೊಂಡಿದೆ ಎಂದು ವ್ಯಂಗ್ಯವಾಡಿದ್ದರು. ಅಷ್ಟೇ ಅಲ್ಲ, ಎಚ್‌ಡಿಕೆ ವಿಧಿವಿಜ್ಞಾನ ತಜ್ಞನೂ ಅಲ್ಲ, ಪೊಲೀಸರಿಗೆ ಅವರ ಸರ್ಟಿಫಿಕೆಟೂ ಬೇಕಿಲ್ಲ ಎಂದು ಹರಿಹಾಯ್ದಿದ್ದಾರೆ.

ಬಾಂಬಿಡುವ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿಯ ಆದಿತ್ಯ ರಾವ್ ಬೆಂಗಳೂರು ಪೊಲೀಸರ ಮುಂದೆ ಶರಣಾಗಿದ್ದಾನೆ.

Related Video