Asianet Suvarna News Asianet Suvarna News

ಚಕ್ರವರ್ತಿ ಸೂಲಿಬೆಲೆ ಬೆನ್ನಿಗೆ ನಿಂತ ಯತ್ನಾಳ್, ಎಂ.ಬಿ. ಪಾಟೀಲ್‌ ವಿರುದ್ಧ ಕಿಡಿ

ಜೈಲಿಗೆ  ಹಾಕ್ತೀವಿ ಎನ್ನೋಕೆ ಇದು ತಾಲಿಬಾನ್  ಅಲ್ಲ, ಕರ್ನಾಟಕ ಎಂದು ಕೈಗಾರಿಕೆ ಸಚಿವ ಎಂಬಿ ಪಾಟೀಲ್ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.

ಜೈಲಿಗೆ  ಹಾಕ್ತೀವಿ ಎನ್ನೋಕೆ ಇದು ತಾಲಿಬಾನ್  ಅಲ್ಲ, ಕರ್ನಾಟಕ ಎಂದು ಕೈಗಾರಿಕೆ ಸಚಿವ ಎಂಬಿ ಪಾಟೀಲ್ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.ಚಕ್ರವರ್ತಿ ಸೂಲಿಬೆಲೆಗೆ  ಸಚಿವ ಎಂಬಿ ಪಾಟೀಲ್ ಎಚ್ಚರಿಕೆ ನೀಡಿದ್ದ ವಿಚಾರವಾಗಿ ಟ್ವೀಟ್ ಮೂಲಕ ಯತ್ನಾಳ್ ಆಕ್ರೋಶ ವ್ಯಕ್ತ ಪಡಿಸಿದ್ದು  ಎಫ್‌ಐಆರ್ ಮಾಡಿಸ್ತೀವಿ, ಜೈಲಿಗೆ ಕಳಿಸ್ತೀವಿ ಪದೇ ಪದೇ ಅನ್ನುವುದಕ್ಕೆ ಇವರೇನು ನ್ಯಾಯಾಧೀಶರಾ? ಎಂದು ಪ್ರಶ್ನಿಸಿದ್ದಾರೆ. ಹಾಗೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೆಲ್ಲ ಸಲ್ಲದು ಎಂದು ಅಭಿಪ್ರಾಯ ಪಟ್ಟಿದ್ದಾರೆ.