Asianet Suvarna News Asianet Suvarna News

'ಅನಭಾಗ್ಯ ಯೋಜನೆ ದರಿದ್ರ ಮಾಡೋ ಯೋಜನೆ, ಬಂದ್ ಮಾಡಿ ಆಗಿದ್ದಾಗ್ಲಿ'

ಅನ್ನಭಾಗ್ಯ ಯೋಜನೆಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.  ಅನಭಾಗ್ಯ ಯೋಜನೆ ದರಿದ್ರ ಮಾಡೋ ಯೋಜನೆ ಎಂದಿದ್ದಾರೆ. ಸಿಎಂ ಕಾರ್ಯಕ್ರಮದ ವೇದಿಕೆ ಮೇಲೆಯೇ ಯತ್ನಾಳ್, ಅನಭಾಗ್ಯ ಯೋಜನೆ ದರಿದ್ರ ಮಾಡೋ ಯೋಜನೆ ಎಂದಿದ್ದು, ಈ ಯೋಜನೆ ಬಂದ್ ಮಾಡಲು ಧೈರ್ಯ ಮಾಡಿ ಆಗಿದ್ದಾಗಲಿ ಎಂದು ಸಿಎಂಗೆ ಹೇಳಿದ್ದಾರೆ.

ವಿಜಯಪುರ, (ಏ.26): ಕಡು ಬಡವರಿಗೆ ಅನುಕಾಲವಾಗಲೆಂದು ಈ ಹಿಂದಿನ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ  ಒಂದು ರೂ.ಗೆ ಒಂದು ಕೆ.ಜಿ ಆಹಾರಧಾನ್ಯ ನೀಡುವ 'ಅನ್ನ ಭಾಗ್ಯ' ಯೋಜನೆ ಜಾರಿಗೆ ತಂದಿತ್ತು. 2013ರ ಜುಲೈ ತಿಂಗಳಿನಿಂದ ರಾಜ್ಯದಾದ್ಯಂತ ಜಾರಿಗೊಂಡಿತ್ತು. ಈ ಯೋಜನೆಯನ್ನು 2015-16ನೇ ಸಾಲಿನಲ್ಲಿ ಪರಿಷ್ಕರಿಸಿದ್ದು, ಸರ್ಕಾರ ಘಟಕವಾರು ರೀತಿಯಲ್ಲಿ ಕುಟುಂಬದ ಓರ್ವ ಸದಸ್ಯನಿಗೆ ತಲಾ 5 ಕೆಜಿಯಂತೆ ಉಚಿತವಾಗಿ ಅಕ್ಕಿಯನ್ನು ನೀಡುತ್ತಿದೆ. 

ಅ​ನ್ನ​ಭಾಗ್ಯ ಅಕ್ಕಿ ನೀಡಿದ್ದು ಸಿದ್ದು ಅಲ್ಲ, ಕೇಂದ್ರ: ಯಡಿಯೂರಪ್ಪ

ಆದ್ರೆ, ಈ ಯೋಜನೆಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.  ಅನಭಾಗ್ಯ ಯೋಜನೆ ದರಿದ್ರ ಮಾಡೋ ಯೋಜನೆ ಎಂದಿದ್ದಾರೆ. ಸಿಎಂ ಕಾರ್ಯಕ್ರಮದ ವೇದಿಕೆ ಮೇಲೆಯೇ ಯತ್ನಾಳ್, ಅನಭಾಗ್ಯ ಯೋಜನೆ ದರಿದ್ರ ಮಾಡೋ ಯೋಜನೆ ಎಂದಿದ್ದು, ಈ ಯೋಜನೆ ಬಂದ್ ಮಾಡಲು ಧೈರ್ಯ ಮಾಡಿ ಆಗಿದ್ದಾಗಲಿ ಎಂದು ಸಿಎಂಗೆ ಹೇಳಿದ್ದಾರೆ.

Video Top Stories