ಅ​ನ್ನ​ಭಾಗ್ಯ ಅಕ್ಕಿ ನೀಡಿದ್ದು ಸಿದ್ದು ಅಲ್ಲ, ಕೇಂದ್ರ: ಯಡಿಯೂರಪ್ಪ

*  ಆರೆಸ್ಸೆಸ್‌ ಬಗ್ಗೆ ಹಗುರ ಮಾತಾಡಿದರೆ ಕಾಂಗ್ರೆಸ್‌, ಜೆಡಿಎಸ್‌ ಗೌರವಕ್ಕೇ ಧಕ್ಕೆ
*  ಪ್ರಚಾರ ಮುಗಿದ ತಕ್ಷಣ ರಾಜ್ಯಾದ್ಯಂತ ಪ್ರವಾಸ
*  ಯಾವ ಪಕ್ಷದ ಬಗ್ಗೆಯೂ ಹಗುರವಾಗಿ ಮಾತನಾಡುವುದು ಸರಿಯಲ್ಲ 
 

Former CM Siddaramaiah slams on Siddaramaiah grg

ವಿಜಯಪುರ(ಅ.22): ‘ಅನ್ನಭಾಗ್ಯದ ಅಕ್ಕಿ ನೀಡಿದ್ದು ಕೇಂದ್ರ ಸರ್ಕಾರ(Central Government). ಯಡಿಯೂರಪ್ಪ ಅಥವಾ ಸಿದ್ದರಾಮಯ್ಯ(Siddaramaiah) ಕೊಟ್ಟ ಯೋಜನೆ ಇದಲ್ಲ. ಭಾಗ್ಯಲಕ್ಷ್ಮಿ, ಕಿಸಾನ್‌ ಸಮ್ಮಾನ ಇವೇ ಮುಂತಾದ ಯೋಜನೆಗಳು ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ನಾವು ಕೊಟ್ಟಿದ್ದೇವೆ. ಇದರ ಫಲವಾಗಿಯೇ ಇಂದು ದೇಶದಲ್ಲಿ ಬಿಜೆಪಿ(BJP) ಪರವಾಗಿ ಜನರ ಒಲವು ಇದೆ’

ನಾವು ರಾಜ್ಯದಲ್ಲಿ(Karnataka) ಜಾರಿಗೊಳಿಸಿದ್ದ ಅನ್ನಭಾಗ್ಯ ಯೋಜನೆಯನ್ನು ಬಿಜೆಪಿ ಮೊಟಕುಗೊಳಿಸಿತು ಎಂಬ ಪ್ರತಿಪಕ್ಷದ ಮುಖಂಡ ಸಿದ್ದರಾಮಯ್ಯ ಅವರ ಹೇಳಿಕೆಗೆ ನಿಕಟಪೂರ್ವ ಮುಖ್ಯಮಂತ್ರಿ ಬಿ.​ಎ​ಸ್‌.​ಯ​ಡಿ​ಯೂ​ರಪ್ಪ(BS Yediyurappa) ಅವ​ರು ನೀಡಿರುವ ತಿರುಗೇಟು.

ಗುರುವಾರ ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ(Narendra Modi), ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಮಾಡಿರುವ ಕೆಲಸ ಎಲ್ಲರಿಗೂ ನೆನಪಿದೆ. ಹೀಗಾಗಿ ಸಿಂದಗಿ(Sindagi) ಕ್ಷೇತ್ರದಲ್ಲಿ ಮತದಾರರು ಬಿಜೆಪಿಯನ್ನು ಬೆಂಬಲಿಸಲಿದ್ದಾರೆ. ಸಿಂದಗಿ, ಹಾನಗಲ್‌(Hanagal) ವಿಧಾನಸಭೆ ಉಪ ಚುನಾವಣೆಯಲ್ಲಿ9Byelection) ಬಿಜೆಪಿ ಅಭ್ಯರ್ಥಿಗಳು ಜಯಭೇರಿ ಬಾರಿಸಲಿದ್ದಾರೆ. ಬಿಜೆಪಿ ಪ್ರಚಾರ(Campaign) ಸಭೆಗಳಲ್ಲಿ ಸಹಸ್ರಾರು ಜನ ಸೇರುತ್ತಿದ್ದಾರೆ. ಇದನ್ನು ಕಾಂಗ್ರೆಸ್‌, ಜೆಡಿಎಸ್‌(JDS) ಕಂಡಿದೆ. ಹತಾಶೆರಾಗಿ ಬಿಜೆಪಿ ವಿರುದ್ಧ ಕಾಂಗ್ರೆಸ್‌, ಜೆಡಿಎಸ್‌ ಇಲ್ಲ ಸಲ್ಲದ ಟೀಕೆ ಮಾಡುತ್ತಿವೆ ಎಂದರು.

ಬಿಜೆಪಿಯವರು ಸಮಯ ಸಾಧಕರು: BSY ವಿರುದ್ಧ HDK ವಾಗ್ದಾಳಿ

ಪ್ರತಿಪಕ್ಷಗಳಿಂದ ಅಪಪ್ರಚಾರ:

ನನ್ನ ರಾಜಕೀಯ(Politics) ಜೀವನದಲ್ಲಿ ಅಲ್ಪ ಸಂಖ್ಯಾತ ಮುಸ್ಲಿಮರಿ​ಗೆ(Muslim) ಅನ್ಯಾಯ ಮಾಡಿಲ್ಲ. ನಾನಾಗಲಿ ಅಥವಾ ಪ್ರಧಾನಿ ನರೇಂದ್ರ ಮೋದಿಯವರಾಗಲಿ ಹಿಂದುಗಳಿಗೆ ಕೊಟ್ಟು ಅಲ್ಪ ಸಂಖ್ಯಾತರಿಗೆ ಕೊಡದೇ ಇರುವ ಯಾವುದಾದರೂ ಒಂದು ಕಾರ್ಯಕ್ರಮ ತೋರಿಸಲಿ ಎಂದು ಸವಾಲ್‌ ಎಸೆದರು. ನಾನು, ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ಕಾಲದಲ್ಲಿ ಎಲ್ಲ ಯೋಜನೆಗಳನ್ನು ಹಿಂದು(Hindu), ಮುಸ್ಲಿಂ ಹಾಗೂ ಕ್ರೈಸ್ತರು(Christian) ಎಂದು ಭೇದಭಾವ ಮಾಡಿಲ್ಲ. ಎಲ್ಲರಿಗೂ ಸಮಾನವಾಗಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ ಎಂದರು.

ಅವರ ಗೌರವೇ ಕಡಿ​ಮೆ​ಯಾ​ಗ​ಲಿ​ದೆ:

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಆರ್‌ಎಸ್‌ಎಸ್‌(RSS) ಬಗ್ಗೆ ಹಗುರವಾಗಿ ಮಾತನಾಡಿದರೆ ಅವರ ಗೌರವವೇ ಕಡಿಮೆಯಾಗುತ್ತಿದೆ. ಆರ್‌ಎಸ್‌ಎಸ್‌ ಗೌರವಕ್ಕೆ ಧಕ್ಕೆಯಾಗಲ್ಲ. ಈ ದೇಶದ ರಾಷ್ಟ್ರಪತಿ, ಪ್ರಧಾನಿ ಹಾಗೂ ಬಿಜೆಪಿ ಮುಖ್ಯಮಂತ್ರಿಗಳು ಆರ್‌ಎಸ್‌ಎಸ್‌ ಮೂಲದಿಂದಲೇ ಬಂದಿದ್ದಾರೆ. ಬಿಜೆಪಿ ಅಧಿಕಾರದಲ್ಲಿ ಇರುವ 26 ರಾಜ್ಯಗಳಲ್ಲಿ ಬಹುತೇಕ ಮುಖಂಡರು ಆರ್‌ಎಸ್‌ಎಸ್‌ನಿಂದ ಬಂದಿದ್ದಾರೆ. ಆರ್‌ಎಸ್‌ಎಸ್‌ ಬಗ್ಗೆ ಪ್ರಶ್ನೆ ಕೇಳುವ ಹಕ್ಕು ಕುಮಾರಸ್ವಾಮಿಗೆ(HD Kumaraswamy) ಇಲ್ಲ ಈ ರೀತಿ ಪ್ರಶ್ನೆ ಕೇಳುವ ಅಗತ್ಯವೂ ಇಲ್ಲ. ಅದಕ್ಕೆ ನಾವು ಉತ್ತರ ಕೊಡುವ ಅಗತ್ಯತೆಯೂ ಇಲ್ಲ ಎಂದರು.

ನಳಿನ್ ಕುಮಾರ್ ಕಟೀಲ್ ಮಾತಿಗೆ ಯಡಿಯೂರಪ್ಪ ಬೇಸರ

ಜೆಡಿಎಸ್‌ ಬಿಜೆಪಿಯ ಬಿ ಟೀಂ ಎಂಬ ಆರೋಪದ ಕುರಿತು ಪ್ರತಿಕ್ರಿಯೆ ನೀಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು, ಇದರಲ್ಲಿ ಸತ್ಯಾಂಶ ಇಲ್ಲ. ಕಾಂಗ್ರೆಸ್ಸಿನವರು ಮಾತನಾಡಬಹುದು. ಸ್ವತ: ದೇವೇಗೌಡರು(HD Devegowda) ಇಲ್ಲಿಗೆ ಬಂದು ಕೆಲಸ ಮಾಡುತ್ತಿದ್ದಾರೆ. ಜೆಡಿಎಸ್‌ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಾನು ಒಪ್ಪುವುದಿಲ್ಲ. ಯಾವ ಪಕ್ಷದ ಬಗ್ಗೆಯೂ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ಹೇಳಿದರು.

ಪ್ರಚಾರ ಮುಗಿದ ತಕ್ಷಣ ರಾಜ್ಯಾದ್ಯಂತ ಪ್ರವಾಸ:

ಸಿಂದಗಿ ಪ್ರಚಾರ ಮುಗಿಸಿಕೊಂಡು ಹಾನಗಲ್‌ ವಿಧಾನಸಭೆ ಉಪ ಚುನಾವಣೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತೇನೆ. ಉಪ ಚುನಾವಣೆ ಮುಗಿದ ಬಳಿಕ ಬರುವ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪ್ರವಾಸ ನಡೆಸಿ ಕೇಂದ್ರ ಹಾಗೂ ರಾಜ್ಯದಲ್ಲಿನ ಬಿಜೆಪಿ ಸರ್ಕಾರದ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಲಾಗುವುದು. 140ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆಲ್ಲುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದು. ಜೊತೆಗೆ ಪಕ್ಷದ ಸಂಘಟನೆ ಮಾಡಲಾಗುವುದು ಎಂದು ಹೇಳಿದರು.
 

Latest Videos
Follow Us:
Download App:
  • android
  • ios