Asianet Suvarna News Asianet Suvarna News

ಪಂಚಮಸಾಲಿ ಹೋರಾಟದಲ್ಲಿ ಕಾಣಿಸಿಕೊಂಡ ಯತ್ನಾಳ್‌ಗೆ ಶಾಕ್; ಹೈಕಮಾಂಡ್‌ನಿಂದ ಬುಲಾವ್

ಪಂಚಮಸಾಲಿ ಹೋರಾಟದಲ್ಲಿ ಯತ್ನಾಳ್ ಸಾಹೇಬ್ರು ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದೇ ತಡ, ಹೈ ಕಮಾಂಡ್‌ನಿಂದ ಬುಲಾವ್ ಬಂದಿದೆ. ತರಾತುರಿಯಲ್ಲಿ ನಿನ್ನೆ ರಾತ್ರಿ ದೆಹಲಿಗೆ ದೌಡಾಯಿಸಿದ್ದಾರೆ ಯತ್ನಾಳರು. 

Feb 22, 2021, 10:30 AM IST

ಬೆಂಗಳೂರು (ಫೆ. 22): ಪಂಚಮಸಾಲಿ ಹೋರಾಟದಲ್ಲಿ ಯತ್ನಾಳ್ ಸಾಹೇಬ್ರು ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದೇ ತಡ, ಹೈ ಕಮಾಂಡ್‌ನಿಂದ ಬುಲಾವ್ ಬಂದಿದೆ. ತರಾತುರಿಯಲ್ಲಿ ನಿನ್ನೆ ರಾತ್ರಿ ದೆಹಲಿಗೆ ದೌಡಾಯಿಸಿದ್ದಾರೆ ಯತ್ನಾಳರು. ದೆಹಲಿಗೆ ಬರಲು 2 ದಿನಗಳ ಕಾಲಾವಕಾಶ ಕೇಳುತ್ತಾರೆ. ಕೊಡಲು ಹೈಕಮಾಂಡ್ ಒಪ್ಪುವುದಿಲ್ಲ. ಕೂಡಲೇ ದೆಹಲಿಗೆ ಬರುವಂತೆ ಹೇಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಸರ್ಕಾರದ ವಿರುದ್ಧ ವಾಗ್ದಾಳಿ, ಪಂಚಮಸಾಲಿ ಹೋರಾಟದಲ್ಲಿ ಮುಂಚೂಣಿಯಲ್ಲಿರುವುದು ಮುಳುವಾಗುವ ಸಾಧ್ಯತೆ ಇದೆ. 

ಮೀಸಲಾತಿ ಪಡೆಯದೇ ಹಿಂತಿರುಗಲ್ಲ; ಇಂದಿನಿಂದ ಪಂಚಮಸಾಲಿಗಳ ಸತ್ಯಾಗ್ರಹ ಶುರು