Assembly Election: ಬೆಂಗಳೂರು - ಮೈಸೂರು ಹೈವೇಯನ್ನು ಧರ್ಮಕ್ಕೆ ಕೊಟ್ಟಿಲ್ಲ : ಕುಮಾರಸ್ವಾಮಿ
ಕೇಂದ್ರ ಸರ್ಕಾರ ಮೈಸೂರು-ಬೆಂಗಳೂರು ರಸ್ತೆ ಧರ್ಮಕ್ಕೆ ಕೊಟ್ಟಿಲ್ಲ. ಈ ಎಕ್ಸ್‌ಪ್ರೆಸ್ ವೇ ಕುರಿತಾಗಿ ನಾನು 14 ತಿಂಗಲ್ಲಿ ರೈತರೊಂದಿಗೆ 9 ಮೀಟಿಂಗ್ ಮಾಡಿದ್ದೇನೆ.
ಚಿಕ್ಕಮಗಳೂರು (ಫೆ.25): ಕೇಂದ್ರ ಸರ್ಕಾರ ಮೈಸೂರು-ಬೆಂಗಳೂರು ರಸ್ತೆ ಧರ್ಮಕ್ಕೆ ಕೊಟ್ಟಿಲ್ಲ. ಈ ಎಕ್ಸ್‌ಪ್ರೆಸ್ ವೇ ಕುರಿತಾಗಿ ನಾನು 14 ತಿಂಗಲ್ಲಿ ರೈತರೊಂದಿಗೆ 9 ಮೀಟಿಂಗ್ ಮಾಡಿದ್ದೇನೆ. ಆಗ ನಾನು ಏನು ಮಾಡಿದೆ ಜನಕ್ಕೆ ಗೊತ್ತು. ರೇವಣ್ಣನ ಕೆಲಸವೂ ಗೊತ್ತು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಈ ಕುರಿತು ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಮೈಸೂರು-ಬೆಂಗಳೂರು ರಸ್ತೆ ಧರ್ಮಕ್ಕೆ ಕೊಟ್ಟಿಲ್ಲ. ಈ ಎಕ್ಸ್‌ಪ್ರೆಸ್ ವೇ ಕುರಿತಾಗಿ ನಾನು 14 ತಿಂಗಲ್ಲಿ ರೈತರೊಂದಿಗೆ 9ಮೀಟಿಂಗ್ ಮಾಡಿದ್ದೇನೆ. ಆಗ ನಾನು ಏನು ಮಾಡಿದೆ ಜನಕ್ಕೆ ಗೊತ್ತು. ರೇವಣ್ಣನ ಕೆಲಸವೂ ಗೊತ್ತು. ರಸ್ತೆಯ ಅಭಿವೃದ್ಧಿಯಲ್ಲಿ ನನ್ನ ಶ್ರಮವೂ ಅಗಾಧವಾಗಿದೆ. ಪ್ರಧಾನಿ ಮೋದಿ ಬಂದ ಮೇಲಷ್ಟೆ ದೇಶ ಅಭಿವೃದ್ದಿ ಆಗಿಲ್ಲ. ನಾವು ಹುಟ್ಟುವ ಮುಂಚೆಯೇ ಅಭಿವೃದ್ದಿ ಆಗಿದೆ. ನೆಹರೂ ಕಾಲದಲ್ಲಿ ದೇಶದ ಅಭಿವೃದ್ಧಿ ಸವಾಲಾಗಿತ್ತು. ಗುಜರಾತ್ ಹೋಗಿ ನೋಡಿ. ಅಲ್ಲಿನಪರಿಸ್ಥಿರಿ ಹೇಗಿದೆ ಎಂದು ತಿಳಿಯುತ್ತದೆ. ನಾನು ಕೂಡ ಗುಜರಾತ್ ಫೈಲ್ಸ್ ಓದಿದ್ದೇನೆ. ಅಲ್ಲಿ ಅವರನ್ನ ಹೇಗೆ ಓಡಿಸಿದ್ದಾರೆ ಎಂಬುದು ನನಗೂ ಗೊತ್ತು ಎಂದು ಹೇಳಿದರು.