
ದಳಪತಿ Vs ಗಣಿಧಣಿ, 20 ವರ್ಷಗಳ ರಣ ದುಷ್ಮನಿ! ಗಾಲಿ ರೆಡ್ಡಿ ಪರವಾಗಿ ಅಖಾಡಕ್ಕಿಳಿದ HDK!
ಬಳ್ಳಾರಿ ಪ್ರಕರಣವು 20 ವರ್ಷಗಳ ರಾಜಕೀಯ ವೈರಿಗಳಾದ ದಳಪತಿ ಕುಮಾರಸ್ವಾಮಿ ಮತ್ತು ಗಣಿಧಣಿ ಜನಾರ್ದನ ರೆಡ್ಡಿ ಅವರನ್ನು ಒಂದು ಮಾಡಿದೆ. 150 ಕೋಟಿ ಲಂಚದ ಆರೋಪದಿಂದ ಆರಂಭವಾದ ಇವರ ದ್ವೇಷದ ಚರಿತ್ರೆ ಮತ್ತು ಈಗಿನ ದೋಸ್ತಿಗೆ ಕಾರಣವಾದ ತೆರೆಮರೆಯ ಸತ್ಯವನ್ನು ಈ ವರದಿ ವಿಶ್ಲೇಷಿಸುತ್ತದೆ.
ಬಳ್ಳಾರಿ ಪ್ರಕರಣದಲ್ಲಿ ಘರ್ಜಿಸ್ತಾಯಿದ್ದಾರೆ ಕುಮಾರಸ್ವಾಮಿ.. ಸರ್ಕಾರದ ವಿರುದ್ಧ ಸಮರ ಸಾರಿದ್ದಾರೆ ಕೇಂದ್ರ ಸಚಿವ. ಈ ಮೂಲಕ ಗಣಿಧಣಿಯ ಪರವಾಗಿ ಗಟ್ಟಿಯಾಗಿ ನಿಂತಿದ್ದಾರೆ ದಳಪತಿ. ಬಳ್ಳಾರಿ ಬ್ಯಾನರ್ ಬ್ಯಾಟಲ್ನಲ್ಲಿ ಸಿಡಿದ ಒಂದು ಬುಲೆಟ್ ಎರಡು ದಶಕದ ದುಷ್ಮನಿಯನ್ನ ಕೊನೆಯಾಗಿಸಿದೆ. ಹಾಗಿದ್ರೆ ಏನಿದು ರೆಡ್ಡಿ-ದಳಪತಿ ನಡುವಿನ ದ್ವೇಷ ಚರಿತ್ರೆ..? ಎರಡು ದಶಕದಿಂದ ಇದು ಜೀವಂತವಾಗಿ ಇದ್ದದ್ದು ಯಾಕೆ? ಈಗ ದೋಸ್ತಿ ಮೂಡಿರೋದ್ರ ಹಿಂದಿನ ಅಸಲಿ ಕಥೆಯೇನು?