ಅಲ್ಲಿರುವುದು ಬಿಜೆಪಿಯ ರಾಮ, ನಮಗೆ ಸಿದ್ದರಾಮಯ್ಯನವರೇ ರಾಮ, ಕಾಂಗ್ರೆಸ್ ಮಾಜಿ ಶಾಸಕ!

ಅಂದು ಪುಲ್ವಾಮ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡಿದೆ. ಇದೀಗ ಶ್ರೀರಾಮನ ವಿಚಾರದಲ್ಲಿ ರಾಜಕೀಯ, ಕರಸೇವಕರ ಬಂಧಿಸಿ ರಾಜಕೀಯ ಮಾಡಿತಾ ಕಾಂಗ್ರೆಸ್ ಸರ್ಕಾರ? ಮನೆ ಮನೆಗೆ ರಾಮ ಮಂದಿರದ ಮಂತ್ರಾಕ್ಷತೆ ವಿತರಣೆ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿಗಳ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

Share this Video
  • FB
  • Linkdin
  • Whatsapp

 ರಾಮ ಮಂದಿರ ಆಹ್ವಾನ ವಿಚಾರದಲ್ಲೂ ಭಾರಿ ರಾಜಕೀಯ ನಡೆಯುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಆಯೋಧ್ಯೆಯಲ್ಲಿರುವುದು ಬಿಜೆಪಿ ರಾಮ, ನಮಗೆ ಸಿದ್ದರಾಮಯ್ಯನವರೇ ರಾಮ ಎಂದು ಕಾಂಗ್ರೆಸ್ ಶಾಸಕ ಹೆಚ್ ಆಂಜನೇಯ ಹೇಳಿದ್ದಾರೆ. ಬಿಜೆಪಿ ರಾಮನ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಅಂದು ಪುಲ್ವಾಮ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡಿದೆ. ಇದೀಗ ಶ್ರೀರಾಮನ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ ಎಂದು ಕಾಂಗ್ರೆಸ್ ಸಚಿವ ಹೇಳಿದ್ದಾರೆ. ಇತ್ತ ರಾಮ ಮಂದಿರ ಉದ್ಘಾಟನೆ ಬೆನ್ನಲ್ಲೇ, ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಪ್ರಕರಣ ಸಂಬಂಧ 31 ವರ್ಷದ ಹಳೇ ಪ್ರಕರಣವನ್ನು ಕಾಂಗ್ರೆಸ್ ಸರ್ಕಾರ ಅಗೆದು ತೆಗೆದಿದೆ. ಕರಸೇವಕರನ್ನು ಮತ್ತೆ ಬಂಧಿಸಿರುವ ನಡೆ ಕೋಲಾಹಲಕ್ಕೆ ಕಾರಣವಾಗಿದೆ. ಹಳೇ ಇತರ ಪ್ರಕರಣವನ್ನು ಬದಿಗಿಟ್ಟಿರುವ ಕಾಂಗ್ರೆಸ್, ಕೇವಲ ಕರಸೇವಕರನ್ನೇ ಟಾರ್ಗೆಟ್ ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.

Related Video