Assembly Election: ನಾನು ಸಾಯುವವರೆಗೂ ಆರ್‌ಎಸ್‌ಎಸ್ ವಿರೋಧಿಸುತ್ತೇನೆ: ಸಿದ್ದರಾಮಯ್ಯ
ನಾನು ಸಾಯುವವರೆಗೂ ಆರ್‌ಎಸ್‌ಎಸ್ ವಿರೋಧಿಸುವೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ನಾನು ಹಿಂದೂ, ನಮ್ಮೂರ ದೇವರು ಸಿದ್ದರಾಮೇಶ್ವರ. ಆದರೂ ನನ್ನನ್ನು ಸಿ.ಟಿ. ರವಿ ಸಿದ್ರಾಮುಲ್ಲಾ ಖಾನ್ ಎಂದು ಕರೆಯುತ್ತಾರೆ.
ಬೆಂಗಳೂರು (ಮಾ.06): ನಾನು ಸಾಯುವವರೆಗೂ ಆರ್‌ಎಸ್‌ಎಸ್ ವಿರೋಧಿಸುವೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ನಾನು ಹಿಂದೂ, ನಮ್ಮೂರ ದೇವರು ಸಿದ್ದರಾಮೇಶ್ವರ. ಆದರೂ ನನ್ನನ್ನು ಸಿ.ಟಿ. ರವಿ ಸಿದ್ರಾಮುಲ್ಲಾ ಖಾನ್ ಎಂದು ಕರೆಯುತ್ತಾರೆ.
ಇಸ್ಲಾಂ, ಕ್ರಿಶ್ಚಿಯನ್ ಧರ್ಮ ಇದ್ದರೂ ಮನುಷ್ಯ, ಮನುಷ್ಯನನ್ನು ಬೇದಭಾವ ಮಾಡುವುದಕ್ಕೆ ಹೇಳುತ್ತದೆ. ಆದರೆ, ಇವರು ಹಿಂದೂ, ಕ್ರಿಶ್ಚಿಯನ್ ಹಾಗೂ ಹಿಂದೂ ಧರ್ಮದಲ್ಲಿದ್ದರೂ ದಲಿತರನ್ನು ವಿರೋಧ ಮಾಡುತ್ತಾರೆ. ನಮ್ಮ ಅಪ್ಪ, ಅಮ್ಮ ಹಿಂದೂ, ನಾನು ಪೂಜಿಸುವ ದೇವರು ಹಿಂದೂ ದೇವರಾಗಿದೆ. ಆದರೂ ಸಿ.ಟಿ. ರವಿ ಸಿದ್ರಾಮುಲ್ಲಾಖಾನ್ ಎಂದು ಕರೆಯುತ್ತಾರೆ. ದಾದಾ ಸಾಹೇಬ್ ಅಂಬೇಡ್ಕರ್ ಅವರು ಸನಾತನ ಧರ್ಮವನ್ನು ವಿರೋಧ ಮಾಡುತ್ತಿದ್ದರು. ನಾನೂ ಕೂಡ ಸನಾತನ ಧರ್ಮವನ್ನು ವಿರೋಧಿಸುತ್ತೇನೆ. ನಾನು ಬದುಕಿರುವವರೆಗೂ ಕೂಡ ಆರ್‌ಎಸ್‌ಎಸ್ ಅನ್ನು ವಿರೋಧ ಮಾಡುತ್ತೇನೆ ಎಂದು ವಿಪಕ್ಷ ನಾಯಕ ಸಿದ್ದರಾಂಯ್ಯ ಹೇಳಿದರು.