Assembly Election 2022: 4 ನಾಯಕರು, ಹೊಸ ಚಾಲೆಂಜ್, ಗೆಲ್ಲೋ ಕುದುರೆ ಯಾರು..?
2022 ರ ವಿಧಾನಸಭಾ ಚುನಾವಣೆಗೆ (Assembly Election 2022) ಇನ್ನು ಒಂದು ವರ್ಷ ಮಾತ್ರ ಇದೆ. ಈಗಿನಿಂದಲೇ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿಯಲ್ಲಿ ಸಿದ್ಧತೆ ಶುರುವಾಗಿದೆ. ಸಿಎಂ ಬೊಮ್ಮಾಯಿ, ವಿಪಕ್ಷ ನಾಯಕರಾದ ಡಿಕೆಶಿ (DK Shivakumar) ಸಿದ್ದರಾಮಯ್ಯ (Siddaramaiah) ಹಾಗೂ ಜೆಡಿಎಸ್‌ಗೆ ಸವಾಲು ಎದುರಾಗಿದೆ.
ಬೆಂಗಳೂರು (ಜ. 02): 2022 ರ ವಿಧಾನಸಭಾ ಚುನಾವಣೆಗೆ (Assembly Election 2022) ಇನ್ನು ಒಂದು ವರ್ಷ ಮಾತ್ರ ಇದೆ. ಈಗಿನಿಂದಲೇ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿಯಲ್ಲಿ ಸಿದ್ಧತೆ ಶುರುವಾಗಿದೆ. ಸಿಎಂ ಬೊಮ್ಮಾಯಿ, ವಿಪಕ್ಷ ನಾಯಕರಾದ ಡಿಕೆಶಿ (DK Shivakumar) ಸಿದ್ದರಾಮಯ್ಯ (Siddaramaiah) ಹಾಗೂ ಜೆಡಿಎಸ್‌ಗೆ ಸವಾಲು ಎದುರಾಗಿದೆ.
Free Hindu Temple: ಮುಸ್ಲಿಂ ಅಥವಾ ಕ್ರಿಶ್ಚಿಯನ್ ಧರ್ಮಕ್ಕೆ ಡಿಕೆಶಿ ಮತಾಂತರ ಆಗ್ಲಿ!
ವಿಧಾನಸಭಾ ಚುನಾವಣೆಗೆ ಟ್ರೆಂಡ್ ಸೆಟ್ ಮಾಡುವುದು ಡಿಕೆಶಿ ಹಾಗೂ ಸಿದ್ದು ಮುಂದಿರುವ ಮೊದಲ ಸವಾಲು. ಪಕ್ಷದೊಳಗಿನ ನಾಯಕತ್ವ ಸಂಘರ್ಷವನ್ನು ನಿವಾರಿಸುವುದು, ಅಭ್ಯರ್ಥಿ ಆಯ್ಕೆ ಗೊಂದಲ ನಿವಾರಣೆ, ಜೆಡಿಎಸ್- ಬಿಜೆಪಿ ಶಾಸಕರನ್ನು ಸೆಳೆಯಲು ಸಹಮತದ ನಿರ್ಧಾರವನ್ನು ತೆಗೆದುಕೊಳ್ಳುವುದು ಕಾಂಗ್ರೆಸ್ ಮುಂದಿರುವ ಚಾಲೆಂಜ್.
ಆಡಳಿತ ವಿರೋಧಿ ಅಲೆಯನ್ನು ಹತ್ತಿಕ್ಕುವುದು, ಜನೋಪಯೋಗಿ ಯೋಜನೆಗಳನ್ನು ಘೋಷಿಸಿಸುವುದು, ಆಯಾ ಭಾಗಗಳಲ್ಲಿ ಪ್ರಭಾವಿಗಳಾಗಿರುವ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಬೊಮ್ಮಾಯಿ ಮುಂದಿರುವ ಸವಾಲು. ಇವೆಲ್ಲವನ್ನೂ ಹೇಗೆ ನಿಭಾಯಿಸುತ್ತಾರೆ ಕಾದು ನೋಡಬೇಕಿದೆ.