ಗೌಡರ ಗದ್ದಲದ ಹಿಂದೆ ಒಕ್ಕಲಿಗ ಕೋಟೆ ಗೆಲ್ಲುವ ರೋಚಕ ತಂತ್ರ!

ಅವತ್ತು ಡಿಕೆ ಬ್ರದರ್ಸ್, ಇವತ್ತು ಎಚ್ಡಿಕೆ... ಅಷ್ಟಕ್ಕೂ ಸಚಿವ ಅಶ್ವತ್ಥನಾರಾಯಣ್, ವಿರೋಧ ಪಕ್ಷಗಳ ಒಕ್ಕಲಿಗ ನಾಯಕರನ್ನೇ ಟಾರ್ಗೆಟ್ ಮಾಡ್ತಿರೋದ್ಯಾಕೆ..? ಕೇಸರಿಕಲಿಯ ಈ ಹೆಜ್ಜೆಯ ಹಿಂದಿನ ಗುಟ್ಟೇನು..? ಆ ಇಂಟ್ರೆಸ್ಟಿಂಗ್ ಸ್ಟೋರಿ

Share this Video
  • FB
  • Linkdin
  • Whatsapp

ಬೆಂಗಳೂರು, (ಆಗಸ್ಟ್.13): ಡಿಕೆ ಬ್ರದರ್ಸ್ ವಿರುದ್ಧ ಅಬ್ಬರಿಸಿದ್ದಾಯ್ತು... ಎಚ್ಡಿಕೆ ವಿರುದ್ಧ ರೊಚ್ಚಿಗೆದ್ದ ಸಚಿವ ಅಶ್ವತ್ಥ್... ಕೆಣಕಿದ ಕೇಸರಿ ಕಲಿಯ ಬೆಂಕಿ ಚರಿತ್ರೆ ಬಿಚ್ಚಿಟ್ರು ಕುಮಾರಸ್ವಾಮಿ... ತಾಜ್ ವೆಸ್ಟ್ ಎಂಡ್ ಗುಟ್ಟು ಗೊತ್ತಾ ಅಂದ್ರು ಅಶ್ವತ್ಥನಾರಾಯಣ್. ದಳಪತಿ ವಿರುದ್ಧ ಮುಗಿ ಬಿದ್ದದ್ದೇಕೆ ಸಚಿವ ಕಮಲಾಧಿಪತಿ..? ಒಕ್ಕಲಿಗ ಕೋಟೆಯಲ್ಲಿ ಗೌಡರ ಗದ್ದಲದ ಅಸಲಿ ಗುಟ್ಟೇನು ಗೊತ್ತಾ..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ರಾಮನಗರ ರಣಧೀರ Vs ಮಲ್ಲೇಶ್ವರ ಮಗಧೀರ.

ಆಡಳಿತದ ಹಿತಕ್ಕೆ ಹೋಟೆಲ್‌ನಲ್ಲಿರುತ್ತಿದ್ದ ಎಚ್‌ಡಿಕೆ: ಅಶ್ವತ್ಥ್‌ಗೆ ಸಾ. ರಾ. ಮಹೇಶ್‌ ತಿರುಗೇಟು

ಕೆಲ ತಿಂಗಳುಗಳ ಹಿಂದೆ ರಾಮನಗರ ಅಖಾಡದಲ್ಲಿ ಡಿಕೆ ಬ್ರದರ್ಸ್, ಈಗ ರಾಮನಗರ ರಣಧೀರ ಎಚ್ಡಿಕೆ... ವಿರೋಧ ಪಕ್ಷಗಳ ಪ್ರಬಲ ಒಕ್ಕಲಿಗ ನಾಯಕರ ವಿರುದ್ಧವೇ ಕೇಸರಿ ಪಡೆಯ ಒಕ್ಕಲಿಗ ಲೀಡರ್ ಮುಗಿ ಬೀಳ್ತಿರೋದ್ಯಾಕೆ..? ಅಶ್ವತ್ಥನಾರಾಯಣ್ ರೋಷಾವೇಶದ ಅಸಲಿಯತ್ತೇನು ಅನ್ನೋದನ್ನು ತೋರಿಸ್ತೀವಿ ನೋಡಿ.

Related Video