DK Suresh Vs Ashwath Narayan : ಸಿಎಂ ಮುಂದೆ ಸಂಸದ-ಸಚಿವರ ಫೈಟ್, ಹಿಂದಿನ ರಾಜಕೀಯ ಲೆಕ್ಕಾಚಾರವೇನು.?
ಸಿಎಂ ಬಸವರಾಜ ಬೊಮ್ಮಾಯಿ (Basavaraj bommai) ಎದುರಲ್ಲಿಯೇ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ (Ashwath Narayan) ಹಾಗೂ ಸಂಸದ ಡಿ.ಕೆ.ಸುರೇಶ್ (DK Suresh) ರವರು ಪರಸ್ಪರ ಸವಾಲು ಹಾಕಿಕೊಂಡು ಕೈ ಕೈ ಮಿಲಾಯಿಸಲು ಮುಂದಾದ ಪ್ರಸಂಗ ನಡೆಯಿತು.
ಬೆಂಗಳೂರು (ಜ. 04): ಸಿಎಂ ಬಸವರಾಜ ಬೊಮ್ಮಾಯಿ (Basavaraj bommai) ಎದುರಲ್ಲಿಯೇ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ (Ashwath Narayan) ಹಾಗೂ ಸಂಸದ ಡಿ.ಕೆ.ಸುರೇಶ್ (DK Suresh) ರವರು ಪರಸ್ಪರ ಸವಾಲು ಹಾಕಿಕೊಂಡು ಕೈ ಕೈ ಮಿಲಾಯಿಸಲು ಮುಂದಾದ ಪ್ರಸಂಗ ನಡೆಯಿತು.
Omicron Threat: ಮಾಧ್ಯಮಗಳು ಲಾಕ್‌ಡೌನ್‌ನಂತ ಕಠಿಣ ಪದ ಬಳಸೋದು ಬೇಡ: ಡಾ. ಸುಧಾಕರ್
ರಾಮನಗರದ (Ramanagara) ಜಿಲ್ಲಾ ಕಚೇರಿಗಳ ಸಂಕೀರ್ಣದ ಆವರಣದಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ BR Ambedkar) ಮತ್ತು ನಾಡಪ್ರಭು ಕೆಂಪೇಗೌಡರ (Kempegowda) ಪ್ರತಿಮೆಗಳ ಅನಾವರಣ ಹಾಗೂ ವಿವಿಧ ಕಾಮಗಾರಿಗಳ ಚಾಲನೆ ನೀಡುವ ವೇಳೆ ಸಿಎಂ ಎದುರಿಗೆಯೇ ಅಶ್ವತ್ಥ ನಾರಾಯಣ ಮತ್ತು ಡಿ.ಕೆ.ಸುರೇಶ್ ಬೈಗುಳಕ್ಕೆ ಮುಂದಾಗಿದ್ದರಿಂದ ಗೊಂದಲದ ಗೂಡಾಯಿತು.
ಪ್ರತಿಮೆಗಳ ಅನಾವರಣ ಹಾಗೂ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಸಮಾರಂಭ ಕುರಿತು ಜಿಲ್ಲಾಡಳಿತ ಜನಪ್ರತಿನಿಧಿಗಳ ಪೂರ್ವಭಾವಿ ಸಭೆ ನಡೆಸಿರಲಿಲ್ಲ. ಅಲ್ಲದೆ, ಸಂಸದ ಡಿ.ಕೆ.ಸುರೇಶ್, ವಿಧಾನ ಪರಿಷತ್ ಸದಸ್ಯ ಎಸ್.ರವಿ ಸೇರಿದಂತೆ ಜನಪ್ರತಿನಿಧಿಗಳ ಮನೆ ಬಾಗಿಲಿಗೆ ಆಹ್ವಾನ ಪತ್ರಿಕೆ ತಲುಪಿಸಿತ್ತು. ಇನ್ನು ಆಹ್ವಾನ ನೀಡದ ಕಾರಣ ದಲಿತಪರ ಸಂಘಟನೆಗಳ ಮುಖಂಡರು ಪ್ರತಿಭಟನೆಯ ಎಚ್ಚರಿಕೆ ನೀಡಿದ್ದರು. ಇದನ್ನು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಲಘುವಾಗಿ ಪರಿಗಣಿಸಿದ್ದೆ ಘಟನೆಗೆ ಕಾರಣವಾಯಿತು. ಇದು ಮೇಲ್ನೋಟಕ್ಕೆ ಅ ಕ್ಷಣದಲ್ಲಿ ನಡೆದ ಘಟನೆ ಅನಿಸಿದರೂ, ಇದರ ಹಿಂದೆ ರಾಜಕೀಯ ಲೆಕ್ಕಾಚಾರಗಳಿವೆ. ಏನದು...? ಇಲ್ಲಿದೆ ರಿಪೋರ್ಟ್