Thirthahalli Election Result: 5ನೇ ಬಾರಿಗೆ ಶಾಸನ ಸಭೆಗೆ ಹೋಗಲು ಜನ ಆಶೀರ್ವಾದ ಮಾಡಿದ್ದಾರೆ: ಆರಗ ಜ್ಞಾನೇಂದ್ರ

ಸತತ ಐದನೇ ಬಾರಿಗೆ ಆರಗ ಜ್ಞಾನೇಂದ್ರ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ಮಾಜಿ ಸಚಿವ ಕಿಮ್ಮನೆ ರತ್ನಾಕರ ಸೋಲನ್ನು ಕಂಡಿದ್ದಾರೆ. 
 

Share this Video
  • FB
  • Linkdin
  • Whatsapp

ಶಿವಮೊಗ್ಗ: ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಆರಗ ಜ್ಞಾನೇಂದ್ರ ಭರ್ಜರಿ ಗೆಲುವು ಸಾಧಿಸಿದ್ದಾರೆ. ಆರಗ ಜ್ಞಾನೇಂದ್ರ ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿ ಕಿಮ್ಮನೆ ರತ್ನಾಕರ ಇವರನ್ನು ಸೋಲಿಸಿದ್ದಾರೆ. ಈ ಹಿಂದೆ ಮೂರು ಬಾರಿ ಆರಗ ಜ್ಞಾನೇಂದ್ರ ಗೆಲುವು ಸಾಧಿಸಿದ್ದರೆ, ಕಿಮ್ಮನೆ ಎರಡು ಬಾರಿ ಗೆದ್ದಿದ್ದಾರೆ. ಗೆಲುವಿನ ಬಗ್ಗೆ ಆರಗ ಜ್ಞಾನೇಂದ್ರ ಮಾತನಾಡಿ, ನನಗೆ ತುಂಬಾ ಸಂತೋಷವಾಗಿದೆ. ತೀರ್ಥಹಳ್ಳಿ ಕ್ಷೇತ್ರದ ಜನತೆಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ನನಗೆ ಐದನೇ ಬಾರಿಗೆ ಶಾಸನ ಸಭೆಗೆ ಹೋಗುವುದಕ್ಕೆ ಆಶೀರ್ವಾದ ಮಾಡಿದ್ದಾರೆ. ನನ್ನನ್ನು ಸೋಲಿಸಲು ಅವರಿಬ್ಬರೂ ಒಂದಾದ್ರು, ನನ್ನನ್ನು ಗೆಲ್ಲಿಸಲು ಜನ ಒಂದಾಗಿದ್ದಾರೆ. ಹಾಗಾಗಿ ಇಷ್ಟು ಲೀಡ್‌ನಲ್ಲಿ ನಾನು ಗೆದ್ದಿದ್ದೇನೆ. ಸುಳ್ಳು ಅಪಪ್ರಚಾರ, ವಂಚನೆ ಕಾರ್ಡ್‌ಗಳು ಇವು ಸ್ವಲ್ಪ ಕೆಲಸ ಮಾಡಿದ ಪರಿಣಾಮ ನಮಗೆ ರಾಜ್ಯದಲ್ಲಿ ಹಿನ್ನಡೆಯಾಗಿದೆ ಎಂದು ಆರಂಗ ಜ್ಞಾನೇಂದ್ರ ಹೇಳಿದ್ದಾರೆ. 

ಇದನ್ನೂ ವೀಕ್ಷಿಸಿ: ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ಜನ ಗೆಲ್ಲಿಸಿದ್ದಾರೆ : ಮಹೇಶ ಟೆಂಗಿನಕಾಯಿ

Related Video