ಸಿಎಂ ಬದಲಾವಣೆ ಗುಮ್ಮಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಡಿಚ್ಚಿ

 ಶೀಘ್ರದಲ್ಲಿಯೇ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಮೂರನೇ ಸಿಎಂ ಕಾಣಲಿದೆ ಎಂದು ಟ್ವೀಟ್‌ ಮಾಡಿದ ಬೆನ್ನಲ್ಲಿಯೇ, ಸಿಎಂ ಬದಲಾವಣೆ ಚರ್ಚೆ ದೊಡ್ಡ ಮಟ್ಟದಲ್ಲಿ ಆರಂಭವಾಗಿದೆ.  ಇನ್ನು  ಸಿಎಂ ಬದಲಾವಣೆ ಗುಮ್ಮಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿ ಡಿಚ್ಚಿ ಕೊಟ್ಟಿದ್ದಾರೆ.

First Published Aug 10, 2022, 3:10 PM IST | Last Updated Aug 10, 2022, 3:10 PM IST

ಶಿವಮೊಗ್ಗ, (ಆಗಸ್ಟ್.10):  ಶೀಘ್ರದಲ್ಲಿಯೇ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಮೂರನೇ ಸಿಎಂ ಕಾಣಲಿದೆ ಎಂದು ಟ್ವೀಟ್‌ ಮಾಡಿದ ಬೆನ್ನಲ್ಲಿಯೇ, ಸಿಎಂ ಬದಲಾವಣೆ ಚರ್ಚೆ ದೊಡ್ಡ ಮಟ್ಟದಲ್ಲಿ ಆರಂಭವಾಗಿದೆ.  

'ಧಮ್ ಇದ್ರೆ ನಿಮ್ಮ ಸಿಎಂ ಅಭ್ಯರ್ಥಿ ಘೋಷಿಸಿ' ಕಾಂಗ್ರೆಸ್‌ಗೆ ಆರ್. ಅಶೋಕ್‌ ಸವಾಲ್

ಅಮಿತ್‌ ಶಾ ರಾಜ್ಯಕ್ಕೆ ಬಂದಿದ್ದರು. ಅಂದಿನಿಂದ ಬಿಜೆಪಿಯಲ್ಲಿ ಮೋಡ ಕವಿದ ವಾತಾವರಣವಿದ್ದು, ಇದು ಸಿಎಂ ಬದಲಾವಣೆಯ ಮುನ್ಸೂಚನೆ ಎನ್ನುವ ಅರ್ಥದಲ್ಲಿ ಕಾಂಗ್ರೆಸ್‌ ಟ್ವೀಟ್ ಮಾಡಿತ್ತು. ಇದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಇನ್ನು ಈ ಸಿಎಂ ಬದಲಾವಣೆ ಗುಮ್ಮಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿ ಡಿಚ್ಚಿ ಕೊಟ್ಟಿದ್ದಾರೆ.