Asianet Suvarna News Asianet Suvarna News

ವಿಜಯನಗರ ಜಿಲ್ಲೆ ಘೋಷಣೆಗೆ ಆನಂದ್ ಸಿಂಗ್ ಡೆಡ್‌ಲೈನ್? ಬಿಜೆಪಿಗೆ ಮತ್ತೆ ಟೆನ್ಶನ್

Dec 28, 2019, 3:41 PM IST

ಬೆಂಗಳೂರು (ಡಿ.28): ಬಿಜೆಪಿ ಸೇರಿದ ಬಳಿಕ ತೆರೆಮರೆಯಲ್ಲಿದ್ದ ವಿಜಯನಗರ ಶಾಸಕ ಆನಂದ್ ಸಿಂಗ್ ಮತ್ತೆ ಅಖಾಡಕ್ಕಿಳಿದಿದ್ದಾರೆ. ಪ್ರತ್ಯೇಕ ವಿಜಯನಗರ ಜಿಲ್ಲೆ ಘೋಷಣೆ ವಿಚಾರವಾಗಿ ಬಿಜೆಪಿ ನಾಯಕರಿಗೆ ಡೆಡ್‌ಲೈನ್ ಇಟ್ಟಿದ್ದಾರೆ.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಆನಂದ್ ಸಿಂಗ್ ಪ್ರತ್ಯೇಕ ಜಿಲ್ಲೆಗಾಗಿ ಲಾಬಿ ನಡೆಸುತ್ತಿದ್ದು, ಬಳ್ಳಾರಿಯ ಇತರ ಬಿಜೆಪಿ ನಾಯಕರ ಸಿಟ್ಟಿಗೆ ಕಾರಣವಾಗಿದೆ. ಆನಂದ್ ಸಿಂಗ್ ಬೇಡಿಕೆ ಬಿಜೆಪಿ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.