4 ಜಿಲ್ಲೆ ಪ್ರಮುಖರ ಜೊತೆ ಅಮಿತ್ ಶಾ ಮೀಟಿಂಗ್; ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಬಳ್ಳಾರಿಯಲ್ಲಿ ನಡೆದ ವಿಜಯ ಸಂಕಲ್ಪ ಸಮಾವೇಶದ ಬಳಿಕ 4 ಜಿಲ್ಲೆ ಪ್ರಮುಖರ ಜೊತೆ ಅಮಿತ್ ಶಾ ಸಭೆ ನಡೆಸಿದ್ದಾರೆ.

Share this Video
  • FB
  • Linkdin
  • Whatsapp

ಬಳ್ಳಾರಿ (ಫೆ.23): ಬಳ್ಳಾರಿ ಜಿಲ್ಲೆಯ ಸಂಡೂರಿನ ಎಸ್​ಆರ್​ಎಸ್ ಮೈದಾನದಲ್ಲಿ ಬಿಜೆಪಿ ವಿಜಯ ಸಂಕಲ್ಪ ಸಮಾವೇಶ ನಡೆದಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಸಮಾವೇಶ. ವಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ಧ ಟೀಕಾಪ್ರಹಾರ ನಡೆಸಿದ ಶಾ. ಸಮಾವೇಶದ ನಂತರ ಮೈದಾನದ ಪಕ್ಕದ ಶಿವಪುರ ಅರಮನೆಯಲ್ಲಿ ಆಯೋಜಿಸಲಾದ ಅವಲೋಕನ ಸಭೆಗೆ ಅಮಿತ್ ಶಾ ಭಾಗಿಯಾದರು. ಸಭೆಯಲ್ಲಿ ಸಚಿವರಾದ ಶ್ರೀರಾಮುಲು, ಶಶಿಕಲಾ ಜೊಲ್ಲೆ, ಸೇರಿದಂತೆ ಸಚಿವರು ಹಾಗೂ ಶಾಸಕರು ಭಾಗಿಯಾಗಿದ್ದರು. ಬಳ್ಳಾರಿ, ರಾಯಚೂರು, ಕೊಪ್ಪಳ, ಜಿಲ್ಲೆಗಳ ಶಾಸಕರು ಮತ್ತು ರಾಜ್ಯದ ಪ್ರಮುಖ ನಾಯಕರ ಜೊತೆ ಪಕ್ಷ ಸಂಘಟನೆ, ಪ್ರಚಾರದ ಬಗ್ಗೆ ಶಾ ಸಭೆ ನಡೆಸಿದ್ದಾರೆ.

Related Video