Asianet Suvarna News Asianet Suvarna News

ಬಿಜೆಪಿ ಲಸಿಕೆ ಮೇಲೆ ಭರವಸೆ ಇಲ್ವಂತೆ, ನಪುಂಸಕರಾಗ್ತಾರಂತೆ...! ಒಳ್ಳೆಯ ಹೊತ್ತಲ್ಲಿ ಇದೆಂಥಾ ಕ್ಯಾತೆ.?

2 ಸ್ವದೇಶಿ ಲಸಿಕೆ ತುರ್ತು ಬಳಕೆಗೆ  ಕೇಂದ್ರ ಸರ್ಕಾರ ಅನುಮತಿ ನೀಡಿದೆ. ದೇಶಾದ್ಯಂತ ವಿತರಣೆಗೆ ತಯಾರಿ ಕೂಡಾ ನಡೆದಿದೆ. ಎಲ್ಲವೂ ಚೆನ್ನಾಗಿದೆ ಎಂದುಕೊಳ್ಳುವಾಗಲೇ ಇದಕ್ಕೆ ರಾಜಕೀಯ ಬಣ್ಣ ಮೆತ್ತಿಕೊಂಡಿದೆ.  

ಬೆಂಗಳೂರು (ಜ. 04): 2 ಸ್ವದೇಶಿ ಲಸಿಕೆ ತುರ್ತು ಬಳಕೆಗೆ  ಕೇಂದ್ರ ಸರ್ಕಾರ ಅನುಮತಿ ನೀಡಿದೆ. ದೇಶಾದ್ಯಂತ ವಿತರಣೆಗೆ ತಯಾರಿ ಕೂಡಾ ನಡೆದಿದೆ. ಎಲ್ಲವೂ ಚೆನ್ನಾಗಿದೆ ಎಂದುಕೊಳ್ಳುವಾಗಲೇ ಇದಕ್ಕೆ ರಾಜಕೀಯ ಬಣ್ಣ ಮೆತ್ತಿಕೊಂಡಿದೆ.  'ಕೊರೋನಾ ಲಸಿಕೆ ಬಿಜೆಪಿ ಲಸಿಕೆ. ಹೀಗಾಗಿ ಅದನ್ನು ತಾವು ತೆಗೆದುಕೊಳ್ಳುವುದಿಲ್ಲ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ಸಿಂಗ್‌ ಯಾದವ್‌ ವಿವಾದಿತ ಹೇಳಿಕೆ ನೀಡಿದ್ದಾರೆ.

ಭಿನ್ನಮತ, ಅಪಸ್ವರಗಳಿಗೆ ಬ್ರೇಕ್! ಇಂದಿನಿಂದ ಶುರು ಬಿಎಸ್‌ವೈ ಮಾಸ್ಟರ್‌ ಸ್ಟ್ರೋಕ್

‘ಬಿಜೆಪಿ ನೀಡುತ್ತಿರುವ ಲಸಿಕೆಯ ಮೇಲೆ ನಾವು ವಿಶ್ವಾಸ ಇಡುವುದಾದರೂ ಹೇಗೆ? ನಮ್ಮ ಮೇಲೆ ಬಿಜೆಪಿಯ ಲಸಿಕೆ ಪ್ರಯೋಗಕ್ಕೆ ಅವಕಾಶ ನೀಡುವುದಿಲ್ಲ. 2022ರ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಎಲ್ಲಾ ನಾಗರಿಕರಿಗೂ ಉಚಿತವಾಗಿ ಲಸಿಕೆ ವಿತರಿಸಲಾಗುವುದು’ ಎಂದು ಹೇಳಿರುವುದು ವಿವಾದಕ್ಕೀಡಾಗಿದೆ. 

 

Video Top Stories